ಸೋಮವಾರ, ಜುಲೈ 4, 2022
21 °C
ಕೇರಳ ಬ್ಲಾಸ್ಟರ್ಸ್‌ ಎದುರಾಳಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಹೈದರಾಬಾದ್‌ಗೆ ಪುಟಿದೇಳುವ ಹಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್‌: ಕಳೆದ ಪಂದ್ಯದಲ್ಲಿ ಮುಂಬೈ ಸಿಟಿ ಎದುರು ಸೋತಿರುವ ಹೈದರಾಬಾದ್ ಎಫ್‌ಸಿ ತಂಡವು ಪುಟಿದೇಳುವ ಹಂಬಲದಲ್ಲಿದೆ. ಭಾನುವಾರ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು ಎದುರಿಸಲಿದೆ.

ಟೂರ್ನಿಯಲ್ಲಿ ಉಭಯ ತಂಡಗಳು ಇದುವರೆಗೆ ತಲಾ ಆರು ಪಂದ್ಯಗಳನ್ನು ಆಡಿವೆ. ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಹೈದರಾಬಾದ್ ಎಫ್‌ಸಿ, ಕೇರಳ ತಂಡಕ್ಕಿಂತ ಎರಡು ಸ್ಥಾನ ಮುಂದಿದೆ. ಆದರೆ ಎರಡೂ ತಂಡಗಳ ನಡುವೆ ಪಾಯಿಂಟ್‌ಗಳ ಅಂತರ ಆರು ಎಂಬುದು ಗಮನಾರ್ಹ.

ಕೇರಳ ತಂಡ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಅಜೇಯವಾಗಿದ್ದ ಹೈದರಾಬಾದ್ ಕಳೆದ ಪಂದ್ಯದಲ್ಲಷ್ಟೇ ಮುಂಬೈಗೆ ಮಣಿದಿದೆ. ಎದುರಾಳಿಗಳಿಗೆ ಗೋಲು ಬಿಟ್ಟುಕೊಡುವ ದೌರ್ಬಲ್ಯ ಕೇರಳ ತಂಡವನ್ನು ಕಾಡುತ್ತಿದೆ. ಆ ತಂಡವು ಆಕ್ರಮಣ ವಿಭಾಗದಲ್ಲೂ ಉತ್ತಮ ಸಾಮರ್ಥ್ಯ ತೋರಿಲ್ಲ.

ತಂಡದಲ್ಲಿ ಸುಧಾರಣೆ ಕಂಡುಬರುವ ವಿಶ್ವಾಸವನ್ನು ಬ್ಲಾಸ್ಟರ್ಸ್‌ ಕೋಚ್ ಕಿಬು ವಿಕುನಾ ವ್ಯಕ್ತಪಡಿಸಿದ್ದಾರೆ. ಆದರೆ ಹೈದರಾಬಾದ್ ಎದುರಿನ ಪಂದ್ಯ ಸುಲಭದ ತುತ್ತಲ್ಲ ಎಂದೂ ಹೇಳಿದ್ದಾರೆ.

ಪಂದ್ಯಗಳ ಕೊನೆಯ ಹಂತದಲ್ಲಿ ಹೈದರಾಬಾದ್ ತಂಡದ ಡಿಫೆಂಡಿಂಗ್ ವಿಭಾಗ ದೌರ್ಬಲ್ಯ ಕಾಣುತ್ತಿದೆ. ಅರಿದಾನೆ ಸಂಟಾನ ಆ ತಂಡದ ಶಕ್ತಿಯಾಗಿದ್ದಾರೆ. ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು