ಬುಧವಾರ, ಅಕ್ಟೋಬರ್ 23, 2019
21 °C

ಕೊಲಂಬಿಯಾದಲ್ಲಿ ಕೋಪಾ ಅಮೆರಿಕ ಫೈನಲ್

Published:
Updated:

ಬೊಗೋತ (ಎಎಫ್‌ಪಿ): ಕೊಲಂಬಿಯಾ ಮತ್ತು ಅರ್ಜೆಂಟೀನಾ, 2020ರ ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ದಕ್ಷಿಣ ಅಮೆರಿಕದ ದೇಶಿ ತಂಡಗಳ ನಡುವಿನ ಟೂರ್ನಿಯ ಪಂದ್ಯಕ್ಕೆ ಎರಡು ದೇಶಗಳು ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. ಬಂದರು ನಗರಿ ಬಾರಂಕಿಲಾದ ಮೆಟ್ರೊಪಾಲಿಟಾನೊ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿ ನಡೆಯಲಿದೆ ಎಂದು ಟೂರ್ನಿಯ ಆಡಳಿತ ಮಂಡಳಿ ಅಧ್ಯಕ್ಷ ಇವಾನ್ ಡುಕ್ ಗುರುವಾರ ರಾತ್ರಿ ಘೋಷಿಸಿದರು.

‘ಕೊಲಂಬಿಯಾದಲ್ಲಿ ಫೈನಲ್ ಪಂದ್ಯ ನಡೆಸಬೇಕು ಎಂಬುದು ಅನೇಕರ ಬಯಕೆಯಾಗಿತ್ತು. ಅದಕ್ಕೆ ಈಗ ಮುಹೂರ್ತ ಕೂಡಿ ಬಂದಿದೆ. ಏಪ್ರಿಲ್‌ನಲ್ಲಿ ಈ ಕುರಿತ ಅಧಿಕೃತ ಪತ್ರವನ್ನು ಎರಡೂ ರಾಷ್ಟ್ರಗಳಿಗೆ ಹಸ್ತಾಂತರಿಸಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಡುಕ್ ಹೇಳಿದರು.

ಟೂರ್ನಿಯ ಗುಂಪು ಹಂತದ ಪಂದ್ಯಗಳನ್ನು ಎರಡು ವಲಯಗಳಾಗಿ ವಿಂಗಡಿಸಲಾಗಿದೆ. ಕೊಲಂಬಿಯಾ, ಬ್ರೆಜಿಲ್‌, ವೆನೆಜುವೆಲಾ, ಈಕ್ವಡೊರ್‌ ಮತ್ತು ಪೆರು ಉತ್ತರ ವಲಯದಲ್ಲಿದ್ದು ಅರ್ಜೆಂಟೀನಾ, ಉರುಗ್ವೆ, ಚಿಲಿ, ಬೊಲಿವಿಯಾ ಮತ್ತು ಪರಾಗ್ವೆ ದಕ್ಷಿಣ ವಲಯದಲ್ಲಿವೆ.

ಆಸ್ಟ್ರೇಲಿಯಾ ಮತ್ತು ಏಷ್ಯಾದ ಚಾಂಪಿಯನ್‌ ಖತಾರ್‌ ಅತಿತಿ ತಂಡಗಳಾಗಿ ಈ ಬಾರಿ ಕಣಕ್ಕೆ ಇಳಿಯಲಿವೆ. ಈ ತಂಡಗಳನ್ನು ಯಾವ ವಲಯಗಳಿಗೆ ಸೇರಿಸಬೇಕು ಎಂಬುದು ಇನ್ನೂ ನಿರ್ಧಾರವಾಗಲಿಲ್ಲ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)