ಸಾಧಿಸಲು ಏನೂ ಉಳಿದಿಲ್ಲ.. ನಿವೃತ್ತಿಯ ಸುಳಿವು ನೀಡಿದ ಫುಟ್‌ಬಾಲ್ ತಾರೆ ಮೆಸ್ಸಿ

ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಫಿಫಾ ಫುಟ್‌ಬಾಲ್ ವಿಶ್ವಕಪ್ ಗೆದ್ದು ತಮ್ಮ ಕನಸನ್ನು ಈಡೇರಿಸಿಕೊಂಡಿರುವ ಚಾಂಪಿಯನ್ ಲಯೊನಲ್ ಮೆಸ್ಸಿ ಇನ್ನೇನು ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ.
ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನ ಅರ್ಬನ್ ಪ್ಲೇ ಎಂಬ ಮಾಧ್ಯಮದ ಜೊತೆ ಮಾತನಾಡಿರುವ ಅವರು, ‘ನನ್ನ ವೃತ್ತಿ ಜೀವನದ ಅಂತ್ಯ ಸಮೀಪಿಸಿದೆ. ಪ್ರಮಾಣಿಕವಾಗಿ ಹೇಳಬೇಕೆಂದರೆ, ವೃತ್ತಿ ಜೀವನಚಕ್ರದ ಸುತ್ತು ತನ್ನ ಸುತ್ತುವಿಕೆಯನ್ನು ಮುಗಿಸುತ್ತಿರುವ ಸಮಯವಿದು’ ಎಂದಿದ್ದಾರೆ.
ಓದಿ... ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಗೆದ್ದ ವನಿತೆಯರಿಗೆ ಅದ್ದೂರಿ ಸ್ವಾಗತ
‘ನಾನು ನನ್ನ ವೃತ್ತಿಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ನನ್ನ ವೃತ್ತಿ ಜೀವನದ ಅಂತ್ಯ ಹೀಗಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನಾನೀಗ ಸಾಧಿಸಲು ಏನೂ ಉಳಿದಿಲ್ಲ’ ಎಂದಿದ್ದಾರೆ.
ದೋಹಾದಲ್ಲಿ ಕಪ್ ಗೆದ್ದ ನಂತರ ಲಯೊನಲ್ ಮೆಸ್ಸಿ, ಇನ್ನೂ ಒಂದಷ್ಟು ಕಾಲ ದೇಶಕ್ಕಾಗಿ ಆಡುವ ಪ್ರತಿಜ್ಞೆ ಮಾಡಿದ್ದರು. 35 ವರ್ಷದ ಮೆಸ್ಸಿ ‘ನಾನು ವಿಶ್ವ ಚಾಂಪಿಯನ್ ಆಗಿ ಇನ್ನೂ ಕೆಲವು ಪಂದ್ಯಗಳನ್ನು ಆಡಲು ಬಯಸುತ್ತೇನೆ’ ಎಂದು ತಿಳಿಸಿದ್ದರು.
ಮೆಸ್ಸಿ ಕಳೆದ ವಿಶ್ವಕಪ್‌ನಲ್ಲಿ ಏಳು ಗೋಲುಗಳ ಸರದಾರ. 2006ರಿಂದ ಇದುವರೆಗಿನ ವಿಶ್ವಕಪ್‌ಗಳಲ್ಲಿ ಗಳಿಸಿರುವ ಒಟ್ಟು ಗೋಲುಗಳು ಹದಿಮೂರು.
ಸಭೆಯಲ್ಲಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ನಿಂದಿಸಿದ ಬಿಹಾರದ ಹಿರಿಯ IAS ಅಧಿಕಾರಿ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.