ಮಂಗಳವಾರ, ಜೂನ್ 28, 2022
21 °C

ಆಸ್ಟ್ರಿಯಾ ಫುಟ್‌ಬಾಲ್ ತಂಡಕ್ಕೆ ರಾಲ್ಫ್ ಕೋಚ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವಿಯೆನ್ನಾ: ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಕೋಚ್‌ ರಾಲ್ಫ್ ರಾಂಗ್ನಿಕ್ ಅವರನ್ನು ಆಸ್ಟ್ರಿಯಾ ರಾಷ್ಟ್ರೀಯ ಫುಟ್‌ಬಾಲ್ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ.

ಆಸ್ಟ್ರಿಯಾ ಫುಟ್‌ಬಾಲ್ ಫೆಡರೇಷನ್ ಶುಕ್ರವಾರ ಈ ವಿಷಯ ತಿಳಿಸಿದೆ. ರಾಲ್ಫ್ ಸದ್ಯ ಸಲಹೆಗಾರರಾಗಿ ತಂಡದೊಂದಿಗೆ ಇರುವರು ಎಂದು ಕೂಡ ವಿವರಿಸಲಾಗಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ಕಳೆದ ವರ್ಷ ನವೆಂಬರ್‌ನಿಂದ ಅವರು ಮಧ್ಯಂತರ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜರ್ಮನ್‌ನವರಾದ 63 ವರ್ಷದ ರಾಲ್ಫ್‌ ಅವರನ್ನು ಎರಡು ವರ್ಷಗಳ ಅವಧಿಗೆ ಆಸ್ಟ್ರಿಯಾ ನೇಮಕ ಮಾಡಿಕೊಂಡಿದೆ. 2024ರ ಯುರೋಪಿಯನ್‌ ಚಾಂಪಿಯನ್‌ಷಿಪ್‌ಗೆ ತಂಡ ಅರ್ಹತೆ ಗಳಿಸಿದರೆ ಈ ಅವಧಿಯನ್ನು ನಾಲ್ಕು ವರ್ಷಗಳ ವರೆಗೆ ಮುಂದುವರಿಯುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು