ಬುಧವಾರ, ಸೆಪ್ಟೆಂಬರ್ 23, 2020
19 °C

ಮಹಿಳಾ ಫುಟ್‌ಬಾಲ್‌: ಬೆಂಗಳೂರು ತಂಡಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಣಿಪುರ ಪೊಲೀಸ್ ತಂಡದವರ ಪ್ರಭಾವಿ ಆಟಕ್ಕೆ ಉತ್ತರ ನೀಡಲಾಗದ ಬೆಂಗಳೂರು ಯುನೈಟೆಡ್ ಎಫ್‌ಸಿ ತಂಡ ಮಹಿಳೆಯರ ಫುಟ್‌ಬಾಲ್ ಲೀಗ್‌ನಲ್ಲಿ ಸೋತಿದ್ದಾರೆ. ಲುಧಿಯಾನದಲ್ಲಿ ಶನಿವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಣಿಪುರ ಪೊಲೀಸ್ ತಂಡ 10–0ಯಿಂದ ಗೆದ್ದಿತು.

ಬಾಲಾ ದೇವಿ ಗಳಿಸಿದ ಡಬಲ್ ಹ್ಯಾಟ್ರಿಕ್ (3, 15, 16, 23,59, 78ನೇ ನಿಮಿಷ) ಮತ್ತು ದಯಾ ದೇವಿ (21, 36ನೇ ನಿ) ಅವರ ಅಮೋಘ ಆಟ ಮಣಿಪುರ ಪುಲೀಸ್ ತಂಡದ ಭರ್ಜರಿ ಜಯಕ್ಕೆ ಕಾರಣವಾಯಿತು. ರೀನಾ ರಾಯ್ ದೇವಿ (58ನೇ ನಿ) ಮತ್ತು ಮಂದಾಕಿನಿ (74ನೇ ನಿ) ತಲಾ ಒಂದೊಂದು ಗೋಲು ಗಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು