ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಶೆರಾನೊ ನಿವೃತ್ತಿ: ಭಾವುಕರಾದ ಮೆಸ್ಸಿ, ನೇಮರ್

Last Updated 17 ನವೆಂಬರ್ 2020, 14:14 IST
ಅಕ್ಷರ ಗಾತ್ರ

ಬ್ಯೂನೋಸ್ ಐರಿಸ್‌: ಅರ್ಜೆಂಟೀನಾ ಮತ್ತು ಬಾರ್ಸಿಲೋನಾ ತಂಡದ ಪ್ರಮುಖ ಆಟಗಾರನಾಗಿದ್ದ ಜೇವಿಯರ್ ಮಶೆರಾನೊಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರದಿಂದ ಸಹ ಆಟಗಾರ ಲಯೊನೆಲ್ ಮೆಸ್ಸಿ ಭಾವುಕರಾದರು. ಬಾರ್ಸಿಲೋನಾದ ಕ್ಸಾವಿ ಹೆರ್ನಾಂಡಜ್ ಮತ್ತು ಬ್ರೆಜಿಲ್ ಸ್ಟೈಕರ್‌ ನೇಮರ್ ಕೂಡ ಮಶೆರಾನೊ ಬಗ್ಗೆ ಅಭಿಮಾನದ ನುಡಿಗಳನ್ನಾಡಿದ್ದಾರೆ.

16 ವರ್ಷ ರಾಷ್ಟ್ರೀಯ ತಂಡದಲ್ಲಿ ಆಡಿರುವ ಮೆಸ್ಸಿ 14 ವರ್ಷ ಮಶೆರಾನೊ ಜೊತೆ ಕಣಕ್ಕೆ ಇಳಿದಿದ್ದಾರೆ. ಬಾರ್ಸಿಲೋನಾ ತಂಡದಲ್ಲಿ ಇವರಿಬ್ಬರು ಒಂಬತ್ತು ವರ್ಷ ಜೊತೆಯಲ್ಲಿ ಆಡಿದ್ದಾರೆ. ಮಶೆರಾನೊ ಅವರು ನಾಯಕತ್ವ ತೊರೆದ ನಂತರ ಮೆಸ್ಸಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದಾರೆ. 2014ರ ವಿಶ್ವಕಪ್‌ನಲ್ಲಿ ತಂಡ ಫೈನಲ್ ಪ್ರವೇಶಿಸಿತ್ತು. ಬಾರ್ಸಿಲೋನಾಗೆ ಇವರಿಬ್ಬರು ಇದ್ದ ತಂಡ ಎರಡು ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಮತ್ತು ಎರಡು ಕ್ಲಬ್ ವಿಶ್ವಕಪ್‌ ಟೂರ್ನಿಗಳ ಪ್ರಶಸ್ತಿಗಳನ್ನು ಗೆದ್ದಿದೆ. ಲಾಲಿಗಾ ಟೂರ್ನಿಗಳಲ್ಲಿ ಏಳು ಬಾರಿ ಚಾಂಪಿಯನ್ ಆಗಿದೆ.

‘ಅನೇಕ ವರ್ಷ ಜೊತೆಯಾಗಿಯೇ ಆಡಿದ್ದೇವೆ. ನಿತ್ಯವೂ ಭೇಟಿಯಾಗುತ್ತ, ಮಾತನಾಡುತ್ತ ಇದ್ದೆವು. ಈಗ ವಿದಾಯ ಹೇಳುವುದು ಬೇಸರದ ವಿಷಯ’ ಎಂದು ಮೆಸ್ಸಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

‘ಅರ್ಜೆಂಟೀನಾ ಮತ್ತು ಬಾರ್ಸಿಲೋನಾ ತಂಡಗಳಲ್ಲಿ ಜೊತೆಯಾಗಿ ಅನೇಕ ಸಂದಸದ ಕ್ಷಣಗಳನ್ನು ಕಳೆದಿದ್ದೇವೆ. ಎಷ್ಟೋ ಬಾರಿ ಸವಾಲನ್ನೂ ಎದುರಿಸಿದ್ದೇವೆ. ನಿವೃತ್ತಿ ಘೋಷಿಸಿದ್ದರಿಂದ ಇನ್ನು ಮುಂದೆ ನಿಮ್ಮನ್ನು ಅಂಗಣದಲ್ಲಿ ಭೇಟಿಯಾಗಲು ಸಾಧ್ಯವಿಲ್ಲವಲ್ಲ’ ಎಂದು ಹೆರ್ನಾಂಡಜ್ ಹೇಳಿದ್ದಾರೆ. ಮಶೆರಾನೊ ಜೊತೆಯಲ್ಲೂ ವಿರುದ್ಧವೂ ಆಡಿರುವ ನೇಮರ್ ‘ಅವರೊಬ್ಬ ಅದ್ಭುತ ಆಟಗಾರ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರ್ಜೆಂಟೀನಾ ಚಾಂಪಿಯನ್‌ಷಿಪ್‌ನಲ್ಲಿ ಎಸ್ಟುಡಿಯಾಂಟಿಸ್ ಡಿ ಲಾ ಪ್ಲಾಟ ಕ್ಲಬ್ ಪರ ಕಣಕ್ಕೆ ಇಳಿದಿದ್ದ ಮಶೆರಾನೊ ತಂಡವು ಅರ್ಜೆಂಟೀನಾ ಜೂನಿಯರ್ ವಿರುದ್ಧದ ಪಂದ್ಯದಲ್ಲಿ 0–1ರ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಭಾನುವಾರ ಅವರು ನಿವೃತ್ತಿ ಘೋಷಿಸಿದ್ದರು.

2004 ಮತ್ತು 2008ರ ಒಲಿಂಪಿಕ್ ಚಿನ್ನದ ಪದಕ ಸೇರಿದಂತೆ 21 ಪ್ರಮುಖ ಪ್ರಶಸ್ತಿಗಳನ್ನು ಮಶೆರಾನೊ ರಾಷ್ಟ್ರೀಯ ತಂಡಕ್ಕಾಗಿ ಗೆದ್ದುಕೊಟ್ಟಿದ್ದಾರೆ.ಬಾರ್ಸಿಲೋನಾ ಮಾತ್ರವಲ್ಲದೆ ಕೊರಿಯಂಥಿಯನ್ಸ್, ವೆಸ್ಟ್ ಹ್ಯಾಮ್‌, ಲಿವರ್‌ಪೂಲ್ ಚೀನಾದ ಹೇಮಿ ಫಾರ್ಚ್ಯೂನ್ ತಂಡಗಳ ಪರವಾಗಿಯೂ ಅವರು ಆಡಿದ್ದಾರೆ. 147 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರುಅರ್ಜೆಂಟೀನಾ ಪರವಾಗಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT