ಮ್ಯಾಡ್ರಿಡ್: ಬಾರ್ಸಿಲೋನಾ ಫುಟ್‌ಬಾಲ್ ಕ್ಲಬ್ ತಂಡದ ನಾಯಕ ಲಯೊನೆಲ್ ಮೆಸ್ಸಿ ಅವರು ಮತ್ತೆ ಅಭ್ಯಾಸ ಆರಂಭಿಸಿದ್ದಾರೆ.

ಬಲ ತೊಡೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಅವರು ಹೋದ ಮಂಗಳವಾರದಿಂದ ತಾಲೀಮು ನಡೆಸಿರಲಿಲ್ಲ.

ಭಾನುವಾರ ನಡೆಯುವ ಲಾ ಲಿಗಾ ಟೂರ್ನಿಯ ಪಂದ್ಯದಲ್ಲಿ ಬಾರ್ಸಿಲೋನಾ ತಂಡವು ಮಲೋರ್ಕಾ ಕ್ಲಬ್ ವಿರುದ್ಧ ಸೆಣಸಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮೆಸ್ಸಿ ಅವರು ಸಹ ಆಟಗಾರರ ಜೊತೆ ಸೋಮವಾರ ಅಭ್ಯಾಸ ನಡೆಸಿದರು.

‘ಮೆಸ್ಸಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮತ್ತೊಬ್ಬ ಆಟಗಾರ ಲೂಯಿಸ್ ಸ್ವಾರೆಜ್ ಅವರೂ ಫಿಟ್ ಆಗಿದ್ದಾರೆ. ಇಬ್ಬರೂ ಮಲೋರ್ಕಾ ಎದುರಿನ ಹಣಾಹಣಿಯಲ್ಲಿ ಕಣಕ್ಕಿಳಿಯುವ ವಿಶ್ವಾಸ ಇದೆ’ ಎಂದು ಬಾರ್ಸಿಲೋನಾ ತಂಡದ ಮುಖ್ಯ ಕೋಚ್ ಕ್ವಿಕ್ಯೂ ಸೆಟಿಯಾನ್ ತಿಳಿಸಿದ್ದಾರೆ.

ಬಾರ್ಸಿಲೋನಾ ತಂಡವು ಲಾ ಲಿಗಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟು 27 ಪಂದ್ಯಗಳನ್ನು ಆಡಿ 58 ಪಾಯಿಂಟ್ಸ್ ಕಲೆಹಾಕಿದೆ. ರಿಯಲ್ ಮ್ಯಾಡ್ರಿಡ್ ತಂಡ ಎರಡನೇ ಸ್ಥಾನದಲ್ಲಿದೆ. ಈ ತಂಡದ ಖಾತೆಯಲ್ಲಿ 56 ಪಾಯಿಂಟ್ಸ್ ಇವೆ. 27 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಈ ತಂಡ 16ರಲ್ಲಿ ಗೆದ್ದಿದ್ದು ಎಂಟರಲ್ಲಿ ಡ್ರಾ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.