ಶುಕ್ರವಾರ, ಆಗಸ್ಟ್ 6, 2021
21 °C

ಬಂಗಾಳದ ಬೀಡಿ ಪ್ಯಾಕೆಟ್‌ನಲ್ಲಿ ಮೆಸ್ಸಿ, ರೊನಾಲ್ಡೊ ಚಿತ್ರ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಅರ್ಜೆಂಟೀನಾ ನಾಯಕ ಹಾಗೂ ಫುಟ್ಬಾಲ್ ಲೋಕದ ಜನಪ್ರಿಯ ಆಟಗಾರ ಲಯೊನೆಲ್ ಮೆಸ್ಸಿ, ಭಾರತದಲ್ಲೂ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ 'ಕೋಪಾ ಅಮೆರಿಕ' ಪ್ರಶಸ್ತಿ ಗೆದ್ದಾಗ ಭಾರತದಲ್ಲೂ ಸಂಭ್ರಮ ಮನೆ ಮಾಡಿತ್ತು.

ಈ ಮಧ್ಯೆ ಮೆಸ್ಸಿ ಹೆಸರಿನಲ್ಲಿ ಬೀಡಿಯೊಂದು ನೆಟ್ಟಿಗರ ಗಮನ ಸೆಳೆದಿದ್ದು, ವೈರಲ್ ಆಗಿದೆ.

ಇದನ್ನೂ ಓದಿ: 

ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಎಂಬವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಮೆಸ್ಸಿ ಮಾಡಿರುವ ಮೊದಲ ಜಾಹೀರಾತು ಒಪ್ಪಂದ ಇದಾಗಿದೆ ಎಂದು ತಮಾಷೆಯ ಅಡಿಬರಹವನ್ನು ನೀಡಿದ್ದಾರೆ.

ರುಪಿನ್ ಶರ್ಮಾ ಹಂಚಿರುವ ಚಿತ್ರಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಮೆಸ್ಸಿ ಬೀಡಿ'ಯನ್ನು ಪಶ್ಚಿಮ ಬಂಗಾಳದ ಧುಲಿಯಾನ್‌ನಲ್ಲಿ ಸ್ಥಿತಗೊಂಡಿರುವ ಆರಿಫ್ ಬೀಡಿ ಫ್ಯಾಕ್ಟರಿ ಸಿದ್ಧಪಡಿಸುತ್ತಿದೆ ಎಂಬುದು ತಿಳಿದು ಬಂದಿದೆ. ಮೆಸ್ಸಿ ಚಿತ್ರದೊಂದಿಗೆ ಬೀಡಿ ಮಾರಾಟ ಮಾಡಲಾಗುತ್ತಿದೆ.

ಕೇವಲ ಮೆಸ್ಸಿ ಮಾತ್ರವಲ್ಲದೆ ಫೋರ್ಚುಗಲ್‌ನ ಅತಿ ಬೇಡಿಕೆಯ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನಲ್ಲಿರುವ ಬೀಡಿ ಪ್ಯಾಕೆಟ್ ವೈರಲ್ ಆಗಿದೆ.

ಲಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ, ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಚಾರ ರಾಯಭಾರಿಯಾಗಿದ್ದು, ಕೋಟಿಗಟ್ಟಲೆ ರೂಪಾಯಿಯ ಬ್ರ್ಯಾಂಡ್ ಮೌಲ್ಯವನ್ನು ಹೊಂದಿದ್ದಾರೆ. ಹಾಗಿರಬೇಕಾದರೆ ಭಾರತದ ಬೀಡಿ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು