ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರನನ್ನು ‘ಮಂಗ’ ಎಂದ ರೆಫರಿ: ಕೋಚ್‌ ದೂರು

Last Updated 16 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ವಿರುದ್ಧದ ಐಎಸ್‌ಎಲ್‌ ಹಣಾಹಣಿಯ ವೇಳೆ ತಮ್ಮ ತಂಡದ ಆಟಗಾರನನ್ನು ಪಂದ್ಯದ ರೆಫರಿಯು ಮಂಗ ಎಂದು ಕರೆದಿದ್ದಾಗಿ ಮುಂಬೈ ಸಿಟಿ ಎಫ್‌ಸಿ ತಂಡದ ಕೋಚ್ ಜೋರ್ಗೆ ಕೋಸ್ಟಾ ದೂರಿದ್ದಾರೆ.

ಈ ಕುರಿತು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ತನಿಖೆ ನಡೆಸುವ ಸಾಧ್ಯತೆ ಇದೆ.

ಭಾನುವಾರದ ಹಣಾಹಣಿಯಲ್ಲಿ ಮುಂಬೈ ತಂಡ 3–2 ಗೋಲುಗಳಿಂದ ಗೆದ್ದಿತ್ತು.

ಸೌದಿ ಅರೇಬಿಯಾದ ರೆಫರಿ ಟರ್ಕಿ ಅಲಕುದಾಯರ್‌ ಅವರು ಸರ್ಜಿ ಕೆವಿನ್‌ ಅವರನ್ನು ಕೋತಿ ಎಂದು ಕರೆದಿದ್ದಲ್ಲದೇ ಕೆಲ ಸಂಜ್ಞೆಗಳ ಮೂಲಕ ಅವರನ್ನು ಹೀಯಾಳಿಸಿದ್ದರು ಎಂದು ಕೋಸ್ಟಾ ಆರೋಪಿಸಿದ್ದಾರೆ.

‘ಐಎಸ್‌ಎಲ್‌ ಟೂರ್ನಿಯಲ್ಲಿ ಸಾಕಷ್ಟು ಮಂದಿ ವಿದೇಶಿ ಆಟಗಾರರು, ಕೋಚ್‌ಗಳು ಮತ್ತು ನೆರವು ಸಿಬ್ಬಂದಿ ಭಾಗವಹಿಸಿದ್ದಾರೆ. ಈ ಲೀಗ್‌ನ ಯಶಸ್ಸಿಗಾಗಿ ಎಲ್ಲರೂ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು’ ಎಂದಿದ್ದಾರೆ.

‘ಎಐಎಫ್‌ಎಫ್‌ ಶಿಸ್ತು ಸಮಿತಿಯು ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಲೀಗ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT