ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಮುಂಬೈಗೆ ನಾರ್ತ್‌ಈಸ್ಟ್ ಆಘಾತ

ಬ್ಯಾಂಬೊಲಿಮ್: ದೆಶಾರ್ನ್ ಬ್ರೌನ್ ಗಳಿಸಿದ ಎರಡು ಸೊಗಸಾದ ಗೋಲುಗಳ ನೆರವಿನಿಂದ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಜಯಭೇರಿ ಬಾರಿಸಿತು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ 2–1ರಿಂದ ಮುಂಬೈ ಸಿಟಿ ಎಫ್‌ಸಿ ತಂಡಕ್ಕೆ ಆಘಾತ ನೀಡಿತು.
ಸತತ 13ನೇ ಪಂದ್ಯದಲ್ಲಿ ಅಜೇಯವಾಗುಳಿದು ದಾಖಲೆ ನಿರ್ಮಿಸುವ ಹಂಬಲದಲ್ಲಿದ್ದ ಮುಂಬೈ ಕನಸು ನುಚ್ಚುನೂರಾಯಿತು. ವಿಜೇತ ತಂಡದ ಪರ ಬ್ರೌನ್ ಆರು ಹಾಗೂ ಒಂಬತ್ತನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು.
ಮುಂಬೈ ತಂಡದ ಲೇ ಫಾಂಡ್ರೆ 85ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಹಿನ್ನಡೆಯನ್ನು ತಗ್ಗಿಸಿದರು.
ಸೋತರೂ ಮುಂಬೈ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.