ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸದ ವೇಳೆ ತಲೆಗೆ ಪೆಟ್ಟು; ಪಾಕಿಸ್ತಾನ ಕ್ರಿಕೆಟಿಗ ಶಾನ್ ಮಸೂದ್ ಆರೋಗ್ಯ ಸ್ಥಿರ

Last Updated 21 ಅಕ್ಟೋಬರ್ 2022, 16:32 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಅಭ್ಯಾಸ ನಡೆಸುತ್ತಿದ್ದ ವೇಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟರ್‌ ಶಾನ್‌ ಮಸೂದ್‌ ಆರೋಗ್ಯವಾಗಿದ್ದಾರೆ.

'ಚೆಂಡು ಬಿದ್ದ ಸ್ಥಳದಲ್ಲಿ ಹೊರಗಷ್ಟೇ ಪೆಟ್ಟಾಗಿದೆ ಎಂಬುದು ಸಿಟಿ ಸ್ಕ್ಯಾನ್‌ನಿಂದ ತಿಳಿದು ಬಂದಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಶನಿವಾರ ಮತ್ತೆ ಅವರನ್ನು ತಪಾಸಣೆಗೆ ಒಳಪಡಿಸಲಾಗುವುದು' ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದೆ.

ಅಭ್ಯಾಸ ವೇಳೆ ಮೊಹಮ್ಮದ್‌ ನವಾಜ್‌ ಅವರುಬಾರಿಸಿದ ಚೆಂಡು, ಬದಿಯಲ್ಲಿ ನಿಂತಿದ್ದ‌ಮಸೂದ್‌ ತಲೆಗೆ ಬಡಿದಿತ್ತು. ಬ್ಯಾಟಿಂಗ್‌ ನಡೆಸಲು ತಮ್ಮ ಸರದಿಗಾಗಿ ಕಾಯುತ್ತಿದ್ದ ಮಸೂದ್‌, ಕೇವಲ ಪ್ಯಾಡ್‌ಗಳನ್ನಷ್ಟೇ ಧರಿಸಿ ನಿಂತಿದ್ದರು.ಹೆಲ್ಮೆಟ್‌ ಧರಿಸಿರಲಿಲ್ಲ.

ಚೆಂಡು ಬಿದ್ದ ತಕ್ಷಣ ಮಸೂದ್‌ ಸ್ಥಳದಲ್ಲೇ ಕುಸಿದಿದ್ದರು. ಕೂಡಲೇ ವೈದ್ಯರು ಪರೀಕ್ಷಿಸಿದರಾದರೂ ಸ್ಕ್ಯಾನ್‌ ಮಾಡಿಸುವ ಸಲುವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸದ್ಯ ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯವು ಅಕ್ಟೋಬರ್‌ 23ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT