ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್‌ ಫುಟ್ಬಾಲ್‌ ಆಟಗಾರ್ತಿಯರ ಚಡ್ಡಿ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಛೀಮಾರಿ

Last Updated 18 ಸೆಪ್ಟೆಂಬರ್ 2022, 2:10 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನ ಮಹಿಳಾ ಫುಟ್ಬಾಲ್‌ ತಂಡದ ಕ್ರೀಡಾಪಟುಗಳಿಗೆ ಪಂದ್ಯದಲ್ಲಿ ಚಡ್ಡಿ ಧರಿಸಿ ಆಟವಾಡಿದ ಕುರಿತು ಪ್ರಶ್ನಿಸಿದ್ದ ವರದಿಗಾರನಿಗೆ ಛೀಮಾರಿ ಹಾಕಲಾಗಿದೆ.

ಕಠ್ಮಂಡುವಿನಲ್ಲಿ ನಡೆಯುತ್ತಿರುವ ಎಸ್‌ಎಎಫ್‌ಎಫ್‌ ಚಾಂಪಿಯನ್‌ಷಿಪ್‌ನಲ್ಲಿ ಮಾಲ್ಡಿವ್ಸ್‌ ತಂಡದ ವಿರುದ್ಧ 7 ಗೋಲುಗಳ ಅಂತರದಲ್ಲಿ ಪಾಕಿಸ್ತಾನ ವನಿತೆಯರು ಜಯ ಗಳಿಸಿದ್ದಾರೆ. ದೀರ್ಘಾವಧಿ ಬಳಿಕ ಪಾಕ್‌ ತಂಡ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಇದು ಎಂಟು ವರ್ಷಗಳ ಬಳಿಕ ಸಿಕ್ಕ ಮೊದಲ ಜಯವಾಗಿದೆ.

ಪಂದ್ಯದ ನಂತರ ಪಾಕಿಸ್ತಾನ ವನಿತೆಯರ ಫುಟ್ಬಾಲ್‌ ತಂಡದ ಮುಖ್ಯಸ್ಥ, ತರಬೇತುದಾರ ಮತ್ತು ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ ವೇಳೆ ಆಟಗಾರ್ತಿಯರ ಧಿರಿಸಿನ ಬಗ್ಗೆ ಪ್ರಶ್ನಿಸಲಾಗಿದೆ.

ನಾವು ಇಸ್ಲಾಮಿಕ್‌ ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಸೇರಿದವರು ಎಂಬುದು ನಿಮಗೆ ಗೊತ್ತಿದೆ. ಈ ಹುಡುಗಿಯರು ಯಾಕೆ ಚಡ್ಡಿ ಧರಿಸಿ ಆಟವಾಡುತ್ತಿದ್ದಾರೆ? ಯಾಕೆ ಲೆಗ್ಗಿಂಗ್ಸ್‌ ಧರಿಸಿಲ್ಲ? ಎಂದು ಓರ್ವ ವರದಿಗಾರ ಪ್ರಶ್ನಿಸಿದ್ದಾನೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪತ್ರಕರ್ತನ ಪ್ರಶ್ನೆಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.

7 ಗೋಲುಗಳ ಪೈಕಿ 4 ಗೋಲುಗಳನ್ನು ದಾಖಲಿಸಿದ ನಾಧಿಯಾ ಖಾನ್‌ ಅವರ ಹಾಗೂ 8 ವರ್ಷಗಳಲ್ಲಿ ಮೊದಲ ಜಯ ತಂದುಕೊಟ್ಟ ಪಾಕಿಸ್ತಾನ ವನಿತೆಯರ ಸಾಧನೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಅವರ ಧಿರಿಸಿನ ಬಗ್ಗೆ ಪ್ರಶ್ನಿಸಿದ್ದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಪ್ರಶ್ನೆಯನ್ನು ಉಪೇಕ್ಷಿಸಿದ ತಂಡದ ತರಬೇತುದಾರ ಅದೀಲ್‌ ರಿಜ್‌ಕಿ, ಎಲ್ಲರೂ ಪ್ರಗತಿಶೀಲರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT