ಮ್ಯೂನಿಚ್, ಜರ್ಮನಿ: ಪೋರ್ಚುಗಲ್ ತಂಡವು ಯುಇಎಫ್ಎ ನೇಷನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಭಾನುವಾರ ರಾತ್ರಿ ನಡೆದ ಪೋರ್ಚುಗಲ್ ಮತ್ತು ಹಾಲಿ ಚಾಂಪಿಯನ್ ಸ್ಪೇನ್ ನಡುವಣ ಫೈನಲ್ ಪಂದ್ಯವು ನಿಗದಿತ ಅವಧಿಯಲ್ಲಿ 2–2 ಗೋಲುಗಳಿಂದ ಡ್ರಾ ಆಯಿತು. ಪೆನಾಲ್ಟಿಯಲ್ಲಿ 5–3ರಿಂದ ಪೋರ್ಚುಗಲ್ ತಂಡ ಪಾರಮ್ಯ ಸಾಧಿಸಿತು.

21ನೇ ನಿಮಿಷದಲ್ಲಿ ಮಾರ್ಟಿನ್ ಜುಬಿಮೆಂಡಿ ಅವರು ಸ್ಪೇನ್ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಅದಾದ ಐದು ನಿಮಿಷದಲ್ಲಿ ಪೋರ್ಚುಗಲ್ನ ನುನೊ ಮೆಂಡಿಸ್ ಚೆಂಡನ್ನು ಗುರಿ ಸೇರಿಸಿದ್ದರಿಂದ ತಂಡಗಳ ಸ್ಕೋರ್ ಸಮಬಲಗೊಂಡಿತು.

ವಿರಾಮಕ್ಕೆ ಕೆಲವೇ ಕ್ಷಣ ಇರುವಾಗ ಮೈಕೆಲ್ ಒಯಾರ್ಜಬಲ್ (45ನೇ) ಗೋಲು ದಾಖಲಿಸಿದ್ದರಿಂದ ಸ್ಪೇನ್ಗೆ ಮತ್ತೆ ಮುನ್ನಡೆ ಲಭಿಸಿತು. ಆದರೆ, 61ನೇ ನಿಮಿಷದಲ್ಲಿ ಪೋರ್ಚುಗಲ್ನ ಅನುಭವಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (61ನೇ) ಅಮೋಘ ರೀತಿಯಲ್ಲಿ ಗೋಲು ದಾಖಲಿಸಿದರು. ಹೀಗಾಗಿ, ಸ್ಕೋರ್ ಪುನಃ ಸಮವಾಯಿತು.

ಎರಡು ವರ್ಷಕೊಮ್ಮೆ ನಡೆಯುವ ಈ ಟೂರ್ನಿಯಲ್ಲಿ 2019ರಲ್ಲಿ ಪೋರ್ಚುಗಲ್ ಮೊದಲ ಬಾರಿ ಪ್ರಶಸ್ತಿ ಗೆದ್ದಿತ್ತು. 2023ರಲ್ಲಿ ಸ್ಪೇನ್ ತಂಡವು ಕ್ರೊವೇಷ್ಯಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.