ಕೊರೊನಾ ಹಾವಳಿಯ ನಡುವೆಯೇ ನಡೆದ ಯುರೋಪಿಯನ್ ಲೀಗ್ ಫುಟ್ಬಾಲ್ ಪಂದ್ಯಗಳ ಪೈಕಿ ಕೆಲವು ಹೇಗೋ ಮುಗಿದವು. ಇನ್ನು ಕೆಲವು ಕೊನೆಯ ಹಂತದಲ್ಲಿವೆ. ಆತಂಕದ ಜೊತೆಯಲ್ಲೇ ಅಂಗಣಗಳಿಗೆ ಜೀವ ತುಂಬಿದ ಟೂರ್ನಿಗಳಲ್ಲಿಕ್ರಿಸ್ಟಿಯಾನೊ ರೊನಾಲ್ಡೊ ಪಾರಮ್ಯ ಮೆರೆದಿದ್ದಾರೆ.3. ಸೀರಿ 'ಎ' ಟೂರ್ನಿಯಲ್ಲಿ ದಾಖಲೆಗಳನ್ನು ನಿರ್ಮಿಸಿ ಅಭಿಮಾನಿಗಳಿಗೆ ರಸಗವಳ ತಿನ್ನಿಸಿದ್ದಾರೆ.

ವಿಶ್ವ ಫುಟ್ಬಾಲ್ನ ಬತ್ತದ ಉತ್ಸಾಹದ ಚಿಲುಮೆ ಕ್ರಿಸ್ಟಿಯಾನೊ ರೊನಾಲ್ಡೊ, ಚೆಂಡನ್ನು ಡ್ರಿಬಲ್ ಮಾಡಲು ಶುರು ಮಾಡಿದರೆಂದರೆ ಹೊಸ ದಾಖಲೆಯೊಂದು ನಿರ್ಮಾಣಯಿತೆಂದೇ ತಿಳಿಯುವ ಕ್ರೀಡಾಪ್ರಿಯರು ಲಕ್ಷಾಂತರ ಮಂದಿ. ದಾಖಲೆ ಪುಟಗಳನ್ನು ತಿರುವಿ ಹಾಕುತ್ತ ಹಳೆಯ ಮೈಲಿಗಲ್ಲುಗಳ ಮೇಲೆ ಕಣ್ಣಾಡಿಸುವ ಫುಟ್ಬಾಲ್ ತಜ್ಞರೂ ಧಾರಾಳ. ಕೊರೊನಾ ಕಾಲದಲ್ಲಿ ದೇಶಿ ಲೀಗ್ಗೂ ರೊನಾಲ್ಡೊ ದಾಖಲೆಯ ಸವಿ ಸವರಿದ್ದಾರೆ.

ಇಟಾಲಿಯನ್ ಸೀರಿ ‘ಎ’ ಟೂರ್ನಿಯ ಕಳೆದ ಭಾನುವಾರ ನಡೆದ ಸಂಪೋರಿಯಾ ಎದುರಿನ ಪಂದ್ಯದಲ್ಲಿ ಒಂದು ಗೋಲು ಗಳಿಸಿದ ರೊನಾಲ್ಡೊ, ಯುವೆಂಟಸ್ ಪರವಾಗಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಸರಿಗಟ್ಟಿದರು. ಜುಲೈ 21ರಂದು ನಡೆದಿದ್ದ ಲಾಸಿಯೊ ವಿರುದ್ಧದ ಪಂದ್ಯವೂ ಅವರ ದಾಖಲೆಗೆ ವೇದಿಕೆಯಾಗಿತ್ತು. ಆ ಪಂದ್ಯದಲ್ಲಿ ಎರಡು ಗೋಲು ಗಳಿಸುವುದರೊಂದಿಗೆ ರೊನಾಲ್ಡೊ ಸೀರಿ ‘ಎ‘ದಲ್ಲಿ 50 ಗೋಲು ಗಳಿಸಿದ ಸಾಧನೆ ಮಾಡಿದ್ದರು. ಇದರೊಂದಿಗೆ ಯುರೋಪಿಯನ್ ಲೀಗ್ಗಳ ಪ್ರಮುಖ ಮೂರು ಟೂರ್ನಿಗಳಾದ ಇಂಗ್ಲಿಷ್ ಪ್ರೀಮಿಯರ್ ಲೀಗ್, ಲಾಲಿಗಾ ಮತ್ತು ಸೀರಿ ‘ಎ’ಯಲ್ಲಿ ಗೋಲುಗಳ ಅರ್ಧಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಅವರದಾಯಿತು.

ಇಂಗ್ಲಿಷ್ ಪ್ರೀಮಿಯರ್ ಲೀಗ್ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ 196 ಪಂದ್ಯಗಳನ್ನು ಆಡಿರುವ ರೊನಾಲ್ಡೊ 84 ಗೋಲು ಗಳಿಸಿದ್ದಾರೆ. ಲಾಲಿಗಾದಲ್ಲಿ ಅವರು ಆಡುತ್ತಿರುವುದು ರಿಯಲ್ ಮ್ಯಾಡ್ರಿಡ್ ಪರ. ಆ ಟೂರ್ನಿಯಲ್ಲಿ 292 ಪಂದ್ಯಗಳಲ್ಲಿ 311 ಬಾರಿ ಚೆಂಡನ್ನು ಗುರಿ ಸೇರಿಸಿದ್ದಾರೆ. ಸೀರಿ ‘ಎ’ಯಲ್ಲಿ ಅತಿ ವೇಗವಾಗಿ 50 ಗೋಲು ಸಾಧನೆಯ ಮೈಲುಗಲ್ಲು ದಾಟಿದ ದಾಖಲೆಯೂ ಅವರದಾಯಿತು. 50ನೇ ಗೋಲಿಗೆ ಅವರು ತೆಗೆದುಕೊಂಡದ್ದು 61 ಪಂದ್ಯ. ಪ್ರೀಮಿಯರ್ ಲೀಗ್ನ 172ನೇ ಪಂದ್ಯದಲ್ಲಿ 50ನೇ ಗೋಲು ಗಳಿಸಿದ್ದ ಅವರು ಲಾಲಿಗಾದಲ್ಲಿ 51 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಸೀರಿ ‘ಎ’ಯಲ್ಲಿ ಈ ಬಾರಿ 30 ಪಂದ್ಯಗಳಲ್ಲಿ 30 ಗೋಲು ಗಳಿಸಿರುವ ‘ರೋನೊ’ ಈಗ ಮತ್ತೊಂದು ದಾಖಲೆಯ ಹೊಸ್ತಿಲಿನಲ್ಲಿದ್ದಾರೆ. ಯುವೆಂಟಸ್ ಪರವಾಗಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಫೆಲಿಸ್ ಬೊರೆಲ್ (1933–34) ದಾಖಲೆ ಮೀರಿ ನಿಲ್ಲಲು ಅವರಿಗೆ ಬೇಕಾಗಿರುವುದು ಒಂದೇ ಗೋಲು. ಅಂದ ಹಾಗೆ ಯುವೆಂಟಸ್ಗೆ ಲೀಗ್ನಲ್ಲಿ ಎರಡು ಪಂದ್ಯಗಳು ಉಳಿದಿವೆ. ‘ದಾಖಲೆಗಳು ಬೇಕು, ನಿಜ. ಆದರೆ ಅದಕ್ಕಿಂತ ಮಿಗಿಲು ತಂಡದ ಗೆಲುವು‘ ಎಂಬುದು ಅವರ ವಿನೀತ ಭಾವದ ನಿಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.