ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಆರೋಪ: ನೇಮರ್‌ ನಿರಾಳ

Last Updated 28 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಬಾರ್ಸಿಲೋನಾ: ಬ್ರೆಜಿಲ್‌ ಫುಟ್‌ಬಾಲ್‌ ಆಟಗಾರ ನೇಮರ್‌ ಅವರ ಮೇಲಿದ್ದ ಭ್ರಷ್ಟಾಚಾರ ಮತ್ತು ವಂಚನೆ ಆರೋಪಗಳನ್ನು ಸ್ಪೇನ್‌ನ ಸರ್ಕಾರಿ ಪರ ವಕೀಲರು ಕೈಬಿಟ್ಟಿದ್ದಾರೆ.

ನೇಮರ್‌ ಅವರು ಬ್ರೆಜಿಲ್‌ನ ಸಂಟೋಸ್‌ ಕ್ಲಬ್‌ ತೊರೆದು ಸ್ಪೇನ್‌ನ ಬಾರ್ಸಿಲೋನಾ ಕ್ಲಬ್‌ ಸೇರುವ ಸಂದರ್ಭದಲ್ಲಿ ವಂಚನೆ ಎಸಗಿದ್ದರು ಎಂದು ಬ್ರೆಜಿಲ್‌ನ ಹೂಡಿಕೆದಾರ ಸಂಸ್ಥೆ ಡಿಐಎಸ್‌ ದೂರಿತ್ತು.

ಈ ಪ್ರಕರಣದ ವಿಚಾರಣೆ ಬಾರ್ಸಿಲೋನಾದ ನ್ಯಾಯಾಲಯದಲ್ಲಿ ನಡೆದಿದೆ. ‘ಆರೋಪ ಎದುರಿಸುತ್ತಿರುವವರು ಅಪರಾಧ ಎಸಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಎಲ್ಲರನ್ನೂ ಆರೋಪಮುಕ್ತಗೊಳಿಸಬೇಕು’ ಎಂದು ವಕೀಲರಾದ ಲೂಯಿಸ್‌ ಗಾರ್ಸಿಯಾ ಅವರು ನ್ಯಾಯಾಧೀಶರನ್ನು ಕೇಳಿಕೊಂಡರು.

ನೇಮರ್‌ 2013 ರಲ್ಲಿ ಸಂಟೋಸ್‌ ಕ್ಲಬ್‌ ತೊರೆದು ಬಾರ್ಸಿಲೋನಾ ಕ್ಲಬ್‌ ಸೇರಿದ್ದರು. ಸಂಟೋಸ್‌ ಕ್ಲಬ್‌ನಲ್ಲಿದ್ದಾಗ ಅವರ ವ್ಯವಹಾರಗಳನ್ನು ಡಿಐಎಸ್‌ ನೋಡಿಕೊಳ್ಳುತ್ತಿತ್ತು.

‘ಬಾರ್ಸಿಲೋನಾ ಕ್ಲಬ್‌ ಸೇರುವಾಗ ನೇಮರ್‌ ಪಡೆದ ನಿಜವಾದ ಮೊತ್ತವನ್ನು ನಮಗೆ ಬಹಿರಂಗಪಡಿಸಿಲ್ಲ. ಇದರಿಂದ ನ್ಯಾಯಯುತವಾಗಿ ಲಭಿಸಬೇಕಿದ್ದ ಹಣ ನಮಗೆ ಸಿಕ್ಕಿಲ್ಲ’ ಎಂದು ಡಿಐಎಸ್ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT