ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: 2 ಪಂದ್ಯಗಳಿಗೆ ಪ್ರೇಕ್ಷಕರಿಗೆ ನಿರ್ಬಂಧ

Published 4 ಏಪ್ರಿಲ್ 2024, 16:26 IST
Last Updated 4 ಏಪ್ರಿಲ್ 2024, 16:26 IST
ಅಕ್ಷರ ಗಾತ್ರ

ಚಂಡೀಗಢ:  ‘ನಿರೀಕ್ಷಿತವಲ್ಲದ ಬೆಳವಣಿಗೆ’ಯ ಕಾರಣ ಇಂಡಿಯನ್‌ ಸೂಪರ್‌ಲೀಗ್‌ (ಐಎಸ್‌ಎಲ್‌) ತಂಡ ಪಂಜಾಬ್‌ ಎಫ್‌ಸಿ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಕೊನೆಯ ಎರಡು ಪಂದ್ಯಗಳನ್ನು ಪ್ರೇಕ್ಷಕರ ನಿರ್ಬಂಧದ ನಡುವೆ ಆಡಲಿದೆ ಎಂದು ಕ್ಲಬ್‌ ಗುರುವಾರ ಪ್ರಕಟಿಸಿದೆ.

ಕೋಲ್ಕತ್ತ ದೈತ್ಯ ಕ್ಲಬ್‌ಗಳಾದ ಮೋಹನ್ ಬಾಗನ್ ಮತ್ತು ಈಸ್ಟ್‌ ಬೆಂಗಾಲ್ ವಿರುದ್ಧ ಕ್ರಮವಾಗಿ ಏಪ್ರಿಲ್ 6 ಮತ್ತು 10ರಂದು ನಡೆಯುವ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶವಿರುವುದಿಲ್ಲ.

ಈ ಕ್ರೀಡಾಂಗಣದ ಅಧಿಕಾರಿಗಳಿಗೆ ಮಾರ್ಚ್‌ 15ರಂದು ಡೆಲ್ಲಿ ಅಗ್ನಿಶಾಮಕ ಸೇವೆಗಳ ಇಲಾಖೆ, ಸೂಕ್ತ ಸುರಕ್ಷತಾ ವ್ಯವಸ್ಥೆ ಕಲ್ಪಿಸುವವರೆಗೆ ಯಾವುದೇ ಪಂದ್ಯ ನಡೆಸದಂತೆ ಸೂಚಿಸಿ ನೋಟಿಸ್‌ ನೀಡಿತ್ತು.

ಮಾರ್ಚ್‌ 13ರಂದು ಕ್ರೀಡಾಂಗಣದ ಸಿಸಿಟಿವಿ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದರು. ಸಾವಿಗೆ ನಿರ್ಲಕ್ಷ್ಯ ಕಾರಣ ಎಂದು ದೂರು ದಾಖಲಾಗಿತ್ತು.

ಅಗ್ನಿ ಸುರಕ್ಷತಾ ಪ್ರಮಾಣಪತ್ರ ನವೀಕರಿಸದಿರುವುದು ವಿಚಾರಣೆಯ ವೇಳೆ ಬಹಿರಂಗವಾಗಿತ್ತು. ಿದೇ ಕಾರಣಕ್ಕೆ ನೋಟಿಸ್‌ ನೀಡಲಾಗಿತ್ತು.

ಪಂದ್ಯಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಾರಣ ನಿರ್ಬಂಧದ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT