ಶನಿವಾರ, ಜೂನ್ 25, 2022
22 °C

ಪಂದ್ಯದಲ್ಲಿ ರೊನಾಲ್ಡೋ ಎಸೆದಿದ್ದ ಕೈಪಟ್ಟಿ $75,000ಗೆ ಹರಾಜು!

ಎಪಿ Updated:

ಅಕ್ಷರ ಗಾತ್ರ : | |

Cristiano Ronaldo holds his captain armband moments before he threw it to the ground. Credit: AFP Photo

ಬೆಲ್‌ಗ್ರೇಡ್: ಪೋರ್ಚುಗಲ್‌ನ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಕಳೆದ ವಾರ ಬೆಲ್‌ಗ್ರೇಡ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಕೋಪದಿಂದ ಎಸೆದಿದ್ದ ನೀಲಿ ಬಣ್ಣದ ಕೈಪಟ್ಟಿ 64,000 ಯೂರೋ, ಅಂದರೆ $75,000 ಡಾಲರ್ (ಅಂದಾಜು ₹55 ಲಕ್ಷ) ಮೊತ್ತಕ್ಕೆ ಹರಾಜಾಗಿದೆ.

ಈ ಕುರಿತು ಸರ್ಬಿಯನ್ ಸ್ಟೇಟ್ ಟಿವಿ ವರದಿ ಮಾಡಿದ್ದು, ಸರ್ಬಿಯಾದ ಸಂಘಟನೆಯೊಂದು 6 ತಿಂಗಳ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಹಣ ಹೊಂದಿಸಲು ದೇಣಿಗೆ ಸಂಗ್ರಹಕ್ಕೆ ಮುಂದಾಗಿತ್ತು. ಅದರಂತೆ ಆನ್‌ಲೈನ್‌ನಲ್ಲಿ ರೊನಾಲ್ಡೋ ಕೈಪಟ್ಟಿಯನ್ನು ಹರಾಜು ಮಾಡಲಾಗಿದೆ.

ಮೂರು ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೆಲವರು ಅನಗತ್ಯವಾಗಿ ಹೆಚ್ಚಿನ ಮೊತ್ತ ಬಿಡ್ ಮಾಡುವ ಮೂಲಕ ತೊಂದರೆ ನೀಡಿದರೂ, ಕೊನೆಗೆ ಸೂಕ್ತ ಮೊತ್ತಕ್ಕೆ ಹರಾಜಾಗಿದೆ.

ಪೋರ್ಚುಗಲ್ ಮತ್ತು ಸರ್ಬಿಯಾ ನಡುವಣ ಪಂದ್ಯ 2-2 ಅಂಕಗಳೊಂದಿಗೆ ಡ್ರಾ ಕಂಡಿತ್ತು.

ಪಂದ್ಯದ ಕೊನೆಗೆ ಡ್ರೆಸ್ಸಿಂಗ್ ರೂಮ್‌ಗೆ ತೆರಳುವ ಮುನ್ನ ರೊನಾಲ್ಡೋ ಕೋಪದಿಂದ ಕೈಪಟ್ಟಿಯನ್ನು ಎಸೆದು ಹೋಗಿದ್ದರು, ಅದನ್ನು ಎತ್ತಿಕೊಂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ಚಾರಿಟಿ ಸಂಸ್ಥೆಗೆ ನೀಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು