ಭಾನುವಾರ, ಅಕ್ಟೋಬರ್ 24, 2021
23 °C

ರೂಟ್ಸ್‌ ತಂಡಕ್ಕೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೈಥಿಲಿ ಗಳಿಸಿದ ಹ್ಯಾಟ್ರಿಕ್ ಗೋಲುಗಳು ರೂಟ್ಸ್ ಫುಟ್‌ಬಾಲ್ ಸ್ಕೂಲ್ ತಂಡದ ಗೆಲುವಿಗೆ ಕಾರಣವಾದವು. ಅವರ ಆಟದ ಬಲದಿಂದ ಇಲ್ಲಿ ನಡೆಯುತ್ತಿರುವ ಕೆಎಸ್‌ಎಫ್‌ಎ ಸ್ಪೋರ್ಟಿಂಗ್ ಪ್ಲಾನೆಟ್‌ ಮಹಿಳೆಯರ ‘ಎ‘ ಡಿವಿಷನ್ ಲೀಗ್ ಟೂರ್ನಿಯಲ್ಲಿ ಆ ತಂಡವು 7–1ರಿಂದ ಜಿಆರ್‌ಕೆ ಎಫ್‌ಸಿ ತಂಡವನ್ನು ಸೋಲಿಸಿತು. ಮೈಥಿಲಿ 12, 37 ಮತ್ತು 42ನೇ ನಿಮಿಷಗಳಲ್ಲಿ ವಿಜೇತ ತಂಡದ ಪರ ಯಶಸ್ಸು ಸಾಧಿಸಿದರು. ಸಂಜನಾ (13 ಮತ್ತು 60ನೇ ನಿ.), ಶ್ರಾವ್ಯಾ (24ನೇ ನಿ.) ಮತ್ತು ತ್ರೀಶಾ (54ನೇ ನಿ.) ಮಿಂಚಿದರು. ಜಿಆರ್‌ಕೆ ತಂಡದ ರುಚಿ (59ನೇ ನಿ.) ಏಕೈಕ ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಪಿಎಎಸ್‌ಎಸ್‌ ಎಫ್‌ಸಿ 3–2ರಿಂದ ಯುನೈಟೆಡ್‌ ಎಫ್‌ಸಿ ಕೊಡಗು ತಂಡವನ್ನು ಸೋಲಿಸಿತು. ವಿಜೇತ ತಂಡದ ರಫಿಯಾ (36 ಮತ್ತು 44ನೇ ನಿ.) ಗುಂಜನ್‌ (14ನೇ ನಿ.) ಗೋಲು ಹೊಡೆದರೆ, ಕೊಡಗು ತಂಡದ ಪರ ಹರ್ಷಾ (30+1), ತನು ವಿಜಯ್ ಗಾವಡೆ (42ನೇ ನಿ.) ಗೋಲು ಗಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು