‘ಯುವೆಂಟಸ್‌ ಜಯದಲ್ಲಿ ಮ್ಯಾಂಚೆಸ್ಟರ್‌ ಪಾತ್ರ ಇಲ್ಲ’

7

‘ಯುವೆಂಟಸ್‌ ಜಯದಲ್ಲಿ ಮ್ಯಾಂಚೆಸ್ಟರ್‌ ಪಾತ್ರ ಇಲ್ಲ’

Published:
Updated:
Deccan Herald

ಟುರಿನ್‌, ಇಟಲಿ: ಚಾಂಪಿಯನ್ಸ್‌ ಲೀಗ್‌ನ ಪಂದ್ಯದಲ್ಲಿ ಯುವೆಂಟಸ್‌ ತಂಡವು ಜಯಿಸಿದ್ದು, ‘ನಮ್ಮ ಗೆಲುವಿನಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌ ಯಾವ ಪಾತ್ರವನ್ನು ವಹಿಸಿಲ್ಲ’ ಎಂದು ಯುವೆಂಟಸ್‌ ತಂಡದ ಫಾರ್ವರ್ಡ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಿಳಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಯುವೆಂಟಸ್‌ ತಂಡವು 2–1 ಗೋಲುಗಳಿಂದ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡವನ್ನು ಸೋಲಿಸಿತ್ತು. ರೊನಾಲ್ಡೊ ಈ ಮೊದಲು ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನ ಪರವಾಗಿ ಆಡುತ್ತಿದ್ದರು. ಕಳೆದ ಜುಲೈನಲ್ಲಿ ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಯುವೆಂಟಸ್‌ ತಂಡದ ಪರವಾಗಿ ಆಡುತ್ತಿದ್ದಾರೆ. 

ಪಂದ್ಯದ ನಂತರ ನಡೆದ ಟಿ.ವಿ. ಸಂದರ್ಶನದಲ್ಲಿ ಮಾತನಾಡಿದ್ದ ರೊನಾಲ್ಡೊ, ‘ನಮ್ಮ ತಂಡವು ಪ್ರಬಲವಾಗಿತ್ತು. ಪಂದ್ಯವನ್ನು ಗೆಲ್ಲಲು ನಮಗೆ
ವಿಫುಲ ಅವಕಾಶ ದೊರೆತ್ತಿದ್ದರಿಂದ ಗೆಲುವು ಸುಲಭವಾಯಿತು. ಮ್ಯಾಂಚೆಸ್ಟರ್‌ ನಮ್ಮ ಗೆಲುವಿಗೆ ಕಾರಣವಲ್ಲ ಇದು ನಮ್ಮ ಅದೃಷ್ಟದ ಗೆಲುವು’ ಎಂದು ಅವರು ವಿವರಿಸಿದರು. 

‘ಚಾಂಪಿಯನ್ಸ್‌ ಲೀಗ್‌ ವಿಶೇಷವಾದದ್ದು. ಇದರಲ್ಲಿ ಏನು ಬೇಕಾದರೂ ಆಗಬಹುದು. ನಾವು ಈ ಲೀಗ್‌ನಲ್ಲಿ ಆರಾಮವಾಗಿ ಇರಲು ಸಾಧ್ಯವಿಲ್ಲ’ ಎಂದಿದ್ದಾರೆ. 

ರೊನಾಲ್ಡೊ 65 ನಿಮಿಷದಲ್ಲಿ ಗೋಲು ಗಳಿಸಿ, ತಂಡವನ್ನು ಮುನ್ನಡೆಸಿದ್ದರು. ಎದುರಾಳಿ ತಂಡ ಕೊನೆಯ ಐದು ನಿಮಿಷಗಳ‌ಲ್ಲಿ ನಮ್ಮನ್ನು ಎದುರಿಸಲು ಪ್ರಯತ್ನಿಸಿತು. 

‘ಗೋಲು ಗಳಿಸಿದ್ದರಿಂದ ನನಗೆ ಸಂತೋಷವಾಗಿದೆ. ಆದರೆ ನಾವು ಈ ಪಂದ್ಯದಲ್ಲಿ ನಾಲ್ಕು ಗೋಲುಗಳನ್ನು ಗಳಿಸಬಹುದಿತ್ತು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !