ಸೋಮವಾರ, ಸೆಪ್ಟೆಂಬರ್ 20, 2021
22 °C

ಯೂರೊ ಕಪ್ ಫುಟ್‌ಬಾಲ್‌: ಕ್ವಾರ್ಟರ್‌ಫೈನಲ್‌ಗೆ ಇಟಲಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ದಾಖಲೆಯ ಸತತ 12ನೇ ಪಂದ್ಯದಲ್ಲಿ ಜಯದ ಸಿಹಿ ಸವಿದ ಇಟಲಿ ತಂಡವು ಯೂರೊ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು. ಇಲ್ಲಿನ ವೆಂಬ್ಲಿ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ 2–1ರಿಂದ ಆಸ್ಟ್ರಿಯಾ ತಂಡವನ್ನು ಸೋಲಿಸಿತು.

ಜಿದ್ದಾಜಿದ್ದಿನ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಎಲ್ಲ ಗೋಲುಗಳೂ ಹೆಚ್ಚುವರಿ ಅವಧಿಯಲ್ಲೇ ದಾಖಲಾದವು. 95ನೇ ನಿಮಿಷದಲ್ಲಿ ಫೆಡರಿಕೊ ಚೈಸಾ ಇಟಲಿಯ ಗೋಲಿನ ಖಾತೆ ತೆರೆದರು. 105ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದ ಮ್ಯಾಟೆಯೊ ಪೆಸ್ಸಿನಾ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.

114ನೇ ನಿಮಿಷದಲ್ಲಿ ಸಸಾ ಕಲಾಜಿಕ್‌ ಅವರು ಆಸ್ಟ್ರಿಯಾ ಪರ ಒಂದು ಗೋಲು ದಾಖಲಿಸಿದರು.

ಎಂಟರಘಟ್ಟದ ಹಣಾಹಣಿಯಲ್ಲಿ ಇಟಲಿ ತಂಡವು, ಹಾಲಿ ಚಾಂಪಿಯನ್ ಪೋರ್ಚುಗಲ್‌ ಮತ್ತು ಬೆಲ್ಜಿಯಂ ತಂಡಗಳ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದೆ. ಕ್ವಾರ್ಟರ್‌ಫೈನಲ್ ಪಂದ್ಯವು ಶುಕ್ರವಾರ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು