ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್ಬಾಲ್: ಬೆಂಗಳೂರು ಎಫ್‌ಸಿಗೆ ಜಯ

Published 24 ಫೆಬ್ರುವರಿ 2024, 20:20 IST
Last Updated 24 ಫೆಬ್ರುವರಿ 2024, 20:20 IST
ಅಕ್ಷರ ಗಾತ್ರ

ಬೆಂಗಳೂರು: ಇನ್‌ಸ್ಟಿಟ್ಯೂಟ್‌ ಆಟಗಾರ ಶಿವಶಕ್ತಿ ಕೊನೆಗಳಿಗೆಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ತಂಡ ಐಎಸ್‌ಎಲ್ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು.

ಸ್ಪೇನ್‌ನ ಮಿಡ್‌ಫೀಲ್ಡರ್ ಜಾವಿ ಫರ್ನಾಂಡಿಸ್ ಆತಿಥೇಯ ತಂಡಕ್ಕೆ 72ನೇ ನಿಮಿಷ ಮುನ್ನಡೆ ಒದಗಿಸಿದರು. ಆದರೆ ರಾಮ್‌ಲುನ್ಚುಂಗ ಹೈದರಾಬಾದ್ ತಂಡ ಸಮ ಮಾಡಿಕೊಳ್ಳಲು ನೆರವಾದರು. ಪಂದ್ಯ ಮುಗಿಯಲು ಮೂರು ನಿಮಿಷಗಳಿದ್ದಾಗ ಶಿವಶಕ್ತಿ ನಿರ್ಣಾಯಕ ಗೋಲು ಗಳಿಸಿದರು.

ಈ ಗೆಲುವಿನಿಂದ ಅಮೂಲ್ಯ ಮೂರು ಪಾಯಿಂಟ್ ಪಡೆದ ಬೆಂಗಳೂರು ತಂಡ ಈಗ ಎಂಟನೇ ಸ್ಥಾನಕ್ಕೇರಿತು. ಬ್ಲೂಸ್ ತಂಡ ತನ್ನ ಮುಂದಿನ ಪಂದ್ಯವನ್ನು ಮಾರ್ಚ್ 2ರಂದು ದಕ್ಷಿಣದ ಎದುರಾಳಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT