ಜೋರ್ಡನ್‌ ಎದುರಿನ ಪಂದ್ಯಕ್ಕೆ ಚೆಟ್ರಿ ಅಲಭ್ಯ

7

ಜೋರ್ಡನ್‌ ಎದುರಿನ ಪಂದ್ಯಕ್ಕೆ ಚೆಟ್ರಿ ಅಲಭ್ಯ

Published:
Updated:
Deccan Herald

ನವದೆಹಲಿ: ಭಾರತ ತಂಡದ ಪ್ರಮುಖ ಆಟಗಾರ ಸುನಿಲ್‌ ಚೆಟ್ರಿ ಮುಂಬರುವ ಜೋರ್ಡನ್‌ ಎದುರಿನ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಮುನ್ನಡೆಸುವ ಚೆಟ್ರಿ, ನವೆಂಬರ್‌ 5ರಂದು ನಡೆದಿದ್ದ ಕೇರಳ ಬ್ಲಾಸ್ಟರ್ಸ್‌ ಎದುರಿನ ಪಂದ್ಯದ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಎರಡು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

‘ಬಿಎಫ್‌ಸಿ ತಂಡದ ವೈದ್ಯಕೀಯ ಸಿಬ್ಬಂದಿ ನೀಡಿರುವ ವರದಿಯನ್ನು ಪರಿಶೀಲಿಸಿದ್ದೇವೆ. ಚೆಟ್ರಿಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದು ಎಂಬುದು ಎಂ.ಆರ್‌.ಐ ಸ್ಕಾನಿಂಗ್‌ನಿಂದ ತಿಳಿದುಬಂದಿದೆ. ಈಗ ಅವರಿಗೆ ಎರಡು ವಾರ ವಿಶ್ರಾಂತಿಯ ಅಗತ್ಯವಿದೆ’ ಎಂದು ಭಾರತ ಫುಟ್‌ಬಾಲ್‌ ತಂಡದ ಫಿಸಿಯೊ ಗಿಗಿ ಜಾರ್ಜ್‌ ತಿಳಿಸಿದ್ದಾರೆ.

ಜೋರ್ಡನ್‌ ಎದುರಿನ ಪಂದ್ಯ ನವೆಂಬರ್‌ 17ರಂದು ಕಿಂಗ್‌ ಅಬ್ದುಲ್ಲಾ–2 ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ನವೆಂಬರ್‌ 15ರಂದು ಅಮಾನ್‌ಗೆ ತೆರಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !