ಬೆಂಗಳೂರು: ಎಫ್‌ಸಿ ಅಗ್ನಿಪುತ್ರ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–1ರಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ತಂಡವನ್ನು ಮಣಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ಅಗ್ನಿಪುತ್ರ ತಂಡದ ನಿಖಿಲ್‌ರಾಜ್ ಮುರುಗೇಶ್‌ಕುಮಾರ್ (45+5ನೇ ನಿ.), ಸುಖ್‌ರಾಜ್ ಸುಬ್ಬ (57), ಸಚಿನ್ ಕರಣ್ (90+3) ತಲಾ ಒಂದು ಗೋಲು ದಾಖಲಿಸಿದರು. ರಾಜು (90+2ನೇ) ಡ್ರೀಮ್ ತಂಡದ ಪರ ಏಕೈಕ ಗೋಲು ತಂದಿತ್ತರು.
ಮತ್ತೊಂದು ಪಂದ್ಯದಲ್ಲಿ ಎಂಎಫ್‌ಎಆರ್ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ತಂಡವು 3–2ರಿಂದ ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡವನ್ನು ಸೋಲಿಸಿತು. ಯೂನಿಯನ್ ತಂಡದ ಪ್ರತೀಕ್ ಸ್ವಾಮಿ (45+2 ಮತ್ತು 90+3) ಎರಡು ಗೋಲು ಗಳಿಸಿ ಮಿಂಚಿದರೆ, ಬ್ರಿಜೇಶ್ ಕುಮಾರ್ ಯಾದವ್ (86ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಸರವಣಕುಮಾರ್ (14, 18) ಇಂಡಿಪೆಂಡೆಂಟ್ಸ್ ಪರ ಎರಡು ಗೋಲು ದಾಖಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.