ಬೆಂಗಳೂರು: ಮಣಿಪುರ ತಂಡವು ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎನ್‌ಎಫ್‌ಸಿ ಸಬ್ ಜೂನಿಯರ್ ಬಾಲಕರ (ಟಿಯರ್ 1) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯಗಳಿಸಿತು.
ಶನಿವಾರ ನಡೆದ ಪಂದ್ಯದಲ್ಲಿ ಮಣಿಪುರ ತಂಡವು 4–1ರಿಂದ ಕೇರಳದ ವಿರುದ್ಧ ಗೆದ್ದಿತು. ಮಣಿಪುರ ತಂಡದ ಲೈಶ್ರಮ್ ಮಹೇಶ್ ಸಿಂಗ್ (5ನೇ ನಿ, 16ನಿ, 66 ನಿ) ಮೂರು ಹಾಗೂ ಖೂತಿಪಾಮ್ ಮುಕ್ತಾರ್ ರೆಹಮಾನ್ (10ನೆ ನಿ) ಒಂದು ಗೋಲು ಗಳಿಸಿದರು.
ಇನ್ನೊಂದು ಪಂದ್ಯದಲ್ಲಿ ಗುಜರಾತ್ ತಂಡವು 2–0ಯಿಂದ ಜಾರ್ಖಂಡ್ ಎದುರು ಜಯಿಸಿತು. ಆರ್ಯಮನ್ ಖೇಡಿಯಾ (16ನಿ) ಮತ್ತು ಚಂದ್ರವೀರ್ ಸಿಂಗ್ ಬ್ರರಾದ್ (60ನೇ ನಿ) ತಲಾ ಒಂದು ಗೋಲು ಗಳಿಸಿದರು. ಡಿ ಗುಂಪಿನಲ್ಲಿ ಪಶ್ಚಿಮ ಬಂಗಾಳ ತಂಡವು 12–0ಯಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು.