ಫೆಬ್ರುವರಿ 5...ಭಾರಿ ನಿರೀಕ್ಷೆಯೊಂದಿಗೆ ಥಿಂಪುವಿನ ಚಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ಆಡಲು ಇಳಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಭೂತಾನ್‌ನ ಪಾರೊ ಎಫ್‌ಸಿ ವಿರುದ್ಧ ಜಯ ಗಳಿಸಿದ್ದೇನೋ ನಿಜ. ಆದರೆ ತಂಡ ಇದಕ್ಕೆ ಹೆಚ್ಚು ಸಂಭ್ರಮ ವ್ಯಕ್ತಪಡಿಸಲಿಲ್ಲ. ಅಷ್ಟೇನೂ ಬಲಿಷ್ಠವಲ್ಲದ ತಂಡದ ವಿರುದ್ಧ ಎಎಫ್‌ಸಿ ಕಪ್ ಟೂರ್ನಿಯ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿಕೇವಲ ಒಂದು ಗೋಲಿನಿಂದ ಗೆದ್ದ ಕಾರಣ ಮುಂದಿನ ಹಾದಿಯ ಬಗ್ಗೆ ಸುನಿಲ್ ಚೆಟ್ರಿ ಪಾಳಯಕ್ಕೆ ಸಹಜವಾಗಿ ಆತಂಕ ಕಾಡಿತ್ತು.

ಸರಿಯಾಗಿ ಒಂದು ವಾರದ ನಂತರ ಬೆಂಗಳೂರಿನಲ್ಲಿ ಇದೇ ತಂಡದ ಎದುರು ನಡೆದ ‘ರಿವರ್ಸ್’ ಲೆಗ್ ಪಂದ್ಯದಲ್ಲಿ ಬಿಎಫ್‌ಸಿ ಗೋಲುಗಳ ಮಳೆ ಸುರಿಸಿತು. 9–0ಯಿಂದ ಎದುರಾಳಿಗಳನ್ನು ಹಿಮ್ಮೆಟ್ಟಿಸಿದ ತಂಡ ನಿಟ್ಟುಸಿರು ಬಿಟ್ಟಿತು. ಚೇತರಿಸಿಕೊಂಡು ಅಮೋಘ ಜಯ ಸಾಧಿಸಿ ಪ್ಲೇ ಆಫ್ ಹಂತಕ್ಕೇರಿದ ತಂಡಕ್ಕೆ 19ರಂದು ಮತ್ತೆ ನಿರಾಸೆ ಕಾದಿತ್ತು. ಎರಡು ಲೆಗ್‌ಗಳ ಪ್ಲೇ ಆಫ್ ಹಣಾಹಣಿಯ ಮೊದಲ ಪಂದ್ಯದಲ್ಲಿ ಮಾಲ್ಡಿವ್ಸ್‌ನ ಮಜಿಯಾ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನ್ ತಂಡ 2–1 ಗೋಲುಗಳ ಪೆಟ್ಟು ನೀಡಿತು. ಈ ಸೋಲಿನಿಂದ ಕಂಗೆಟ್ಟಿರುವ ಬಿಎಫ್‌ಸಿ ಈಗ ತೀವ್ರ ಒತ್ತಡದಲ್ಲಿದೆ. ಇದೇ 26ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ರಿವರ್ಸ್ ಲೆಗ್’ ಪಂದ್ಯದಲ್ಲಿ ತಿರುಗೇಟು ನೀಡಿ ಸಾಲ ತೀರಿಸದೇ ಇದ್ದರೆ ಈ ಬಾರಿ ಗುಂಪು ಹಂತ ಪ್ರವೇಶಿಸುವ ಕನಸು ಕಮರಿ ಹೋಗಲಿದೆ.

2004ರಿಂದ ಕಳೆದ ವರ್ಷದ ವರೆಗೂ ಪ್ರತಿ ಬಾರಿ ಭಾರತದಿಂದ ತಲಾ ಎರಡು ತಂಡಗಳು ಗುಂಪು ಹಂತ ಪ್ರವೇಶಿಸಿವೆ. ಆದರೆ ಯಾವ ತಂಡಕ್ಕೂ ಪ್ರಶಸ್ತಿ ಎತ್ತಿ ಹಿಡಿಯಲು ಆಗಲಿಲ್ಲ. ಭಾರತದ ಗರಿಷ್ಠ ಸಾಧನೆ ಒಂದು ಬಾರಿಯ ರನ್ನರ್ ಅಪ್ ಸ್ಥಾನ. 2016ರಲ್ಲಿ ಬೆಂಗಳೂರು ಎಫ್‌ಸಿ ಈ ಗರಿಯನ್ನು ಮುಡಿಗೇರಿಸಿಕೊಂಡಿತ್ತು.2013ರಲ್ಲಿ ಅಸ್ತಿತ್ವಕ್ಕೆ ಬಂದ ಬಿಎಫ್‌ಸಿ ಕೇವಲ ಮೂರೇ ವರ್ಷಗಳಲ್ಲಿ ಈ ಅಪರೂಪದ ಸಾಹಸ ಮರೆದಿತ್ತು.ಮೊದಲ ವರ್ಷವೇ ಎಎಫ್‌ಸಿ ಕಪ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿಯೂ ತಂಡ ಗಮನ ಸೆಳೆದಿತ್ತು. ಅಸ್ತಿತ್ವಕ್ಕೆ ಬಂದ ನಂತರ ಸತತ ಮೂರು ವರ್ಷ ರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಎಎಫ್‌ಸಿ ಕಪ್ ಹಣಾಹಣಿಗೆ ಪ್ರವೇಶ ಪಡೆಯುತ್ತಿದೆ. 2018ರಲ್ಲಿ ಫೆಡರೇಷನ್ ಕಪ್ ಟೂರ್ನಿಯ (2017) ವಿಜೇತರಾಗಿ ಎಎಫ್‌ಸಿ ಕಪ್‌ಗೆ ತೇರ್ಗಡೆ ಹೊಂದಿದ್ದ ತಂಡಕ್ಕೆ ಕಳೆದ ಬಾರಿ ನಿರಾಸೆ ಕಾದಿತ್ತು. ಐ ಲೀಗ್ ಚಾಂಪಿಯನ್ ಮಿನರ್ವ ಪಂಜಾಬ್ ಮತ್ತು ಐಎಸ್ಎಲ್ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ 2019ರ ಸಾಲಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದವು.

ಐ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಈ ಬಾರಿಯ ಎಎಫ್‌ಸಿ ಕಪ್‌ಗೆ ಚೆನ್ನೈಯಿನ್ ಪ್ರವೇಶ ಪಡೆದಿದೆ. ನೇರವಾಗಿ ಗುಂಪು ಹಂತಕ್ಕೆ ಸಾಗಿರುವ ಆ ತಂಡ ‘ಇ’ ಗುಂಪಿನಲ್ಲಿದೆ. ಐಎಸ್‌ಎಲ್ ಚಾಂಪಿಯನ್ ಬೆಂಗಳೂರು ತಂಡ ಗುಂಪು ಹಂತಕ್ಕೇರುವ ಸಾಹಸದಲ್ಲಿ ತಲ್ಲೀನವಾಗಿದೆ. ದೇಶಿ ಫುಟ್‌ಬಾಲ್‌ನಲ್ಲಿ ಸಾಂಪ್ರದಾಯಿಕ ವೈರಿಯಾದ ಚೆನ್ನೈಯಿನ್ ತಂಡ ಗುಂಪು ಹಂತದಲ್ಲಿರುವುದರಿಂದ ಆ ಘಟ್ಟಕ್ಕೇರುವ ಛಲಬಿಎಫ್‌ಸಿಗೆ ಹೆಚ್ಚಾಗಿದೆ. ದೇಶಿ ಫುಟ್‌ಬಾಲ್‌ನ ಮತ್ತೊಂದು ಬಲಿಷ್ಠ ತಂಡ ಎಫ್‌ಸಿ ಗೋವಾ ತಂಡ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಗುಂಪು ಹಂತಕ್ಕೆ ನೇರ ಪ್ರವೇಶ ಪಡೆದು ದಾಖಲೆ ಮಾಡಿದೆ. ಎಎಫ್‌ಸಿ ಕಪ್‌ನಲ್ಲಿ ಪ್ರಶಸ್ತಿ ಗೆದ್ದರೆ ಬಿಎಫ್‌ಸಿ ಕೂಡ ಚಾಂಪಿಯನ್ಸ್ ಲೀಗ್‌ಗೆ ಪ್ರವೇಶಿಸಬಹುದು. ಆದ್ದರಿಂದ ತಂಡದ ಮುಂದೆ ಗುರಿ ದೊಡ್ಡದಿದೆ; ಸವಾಲು ಕೂಡ.

ಹೊಸ ಆಟಗಾರರ ಮೇಲೆ ಭರವಸೆ

ಸುನಿಲ್ ಚೆಟ್ರಿ ಗಾಯಗೊಂಡು ಕಣದಿಂದ ದೂರ ಉಳಿದಿರುವಾಗ ಯುವ ಆಟಗಾರರಾದ ಸುರೇಶ್ ಸಿಂಗ್ ವಾಂಗ್ಜಂ, ಪ್ರಭುಸುಖನ್ ಸಿಂಗ್ ಗಿಲ್, ಬಿ ತಂಡದ ರೋಷನ್ ಸಿಂಗ್, ಈಚೆಗೆ ತಂಡ ಸೇರಿಕೊಂಡಿರುವ ನೀಲ್ ಪೆಡ್ರೊಮೊ ಮುಂತಾದವರ ಮೇಲೆ ಬಿಎಫ್‌ಸಿ ಭರವಸೆ ಇರಿಸಿತ್ತು. ಈ ಪೈಕಿ ಸುರೇಶ್ ವಾಂಗ್ಜಂ ಮತ್ತು ನೀಲ್ ಪೆಡ್ರೊಮೊ ಉತ್ತಮ ಸಾಮರ್ಥ್ಯ ತೋರಿ ನಿರೀಕ್ಷೆ ಮೂಡಿಸಿದ್ದಾರೆ. ಮುಂದೆಯೂ ನಿರ್ಣಾಯಕ ಘಟ್ಟದಲ್ಲಿ ಅವರು ಕೈ ಹಿಡಿಯುವರೇ..?

ಎಎಫ್‌ಸಿ ಕಪ್ ವಿಜೇತರು, ರನ್ನರ್ಸ್ ಅಪ್

ವರ್ಷ;ವಿಜೇತರು;ರನ್ನರ್ಸ್

2004;ಅಲ್ ಜೈಶ್(ಸಿರಿಯಾ);ಅಲ್ ವಹಾದ್(ಸಿರಿಯಾ)

2005;ಅಲ್ ಫೈಜಲಿ(ಜೋರ್ಡನ್);ನೆಜ್ಮಾ(ಲೆಬನಾನ್)

2006;ಅಲ್ ಫೈಜಲಿ;ಅಲ್ ಮುಹರಕ್(ಬಹರೇನ್)

2007;ಸಹಬಾಜ್ ಒರ್ಡೊನ್(ಜೋರ್ಡನ್);ಅಲ್ ಅಲ್ಸರಿ(ಜೋರ್ಡನ್)

2008;ಅಲ್ ಮುಹರಕ್(ಬಹರೇನ್);ಸಫಾ (ಲೆಬನಾನ್)

2009;ಅಲ್ ಕುವೈತ್(ಕುವೈತ್);ಅಲ್ ಕರಾಮ(ಸಿರಿಯಾ)

2010;ಅಲ್ ಇಟಿಹಾಡ್(ಸಿರಿಯಾ);ಅಲ್ ಕ್ವಾಸಿಯಾ(ಕುವೈತ್)

2011;ನಸಫ್ ಕ್ವಾರ್ಷಿ(ಉಜ್ಬೆಕಿಸ್ತಾನ್);ಅಲ್ ಕುವೈತ್

2012;ಅಲ್ ಕುವೈತ್;ಎರ್ಬಿಲ್(ಇರಾಕ್)

2013;ಅಲ್ ಕುವೈತ್;ಅಲ್ ಕ್ವಾಸಿಯಾ

2014;ಅಲ್ ಕ್ವಾಸಿಯಾ;ಎರ್ಬಿಲ್

2015;ಜೊಹೊರ್ ದುರುಲ್(ಮಲೇಷ್ಯ);ಇಸ್ತಿಕುಲ್(ತಜಿಕಿಸ್ತಾನ)

2016;ಅಲ್ ಕುವಾ(ಇರಾಕ್);ಬಿಎಫ್‌ಸಿ (ಭಾರತ)

2017;ಅಲ್ ಕುವಾ;ಇಸ್ತಿಕೊಲ್(ತಜಿಕಿಕಸ್ತಾನ್)

2018;ಅಲ್ ಕುವಾ;ಇಲ್ಟಿನ್ ಅಸಿರ್(ತುರ್ಕಮೆನಿಸ್ತಾನ್)

2019;ಅಲ್ ಅಹದ್(ಲೆಬನಾನ್);ಏಪ್ರಿಲ್ 25(ಉ.ಕೊರಿಯಾ)

ವರ್ಷವಾರು ಗರಿಷ್ಠ ಗೋಲು

ವರ್ಷ;ಆಟಗಾರ;ಕ್ಲಬ್;ಗೋಲು

2004;ಇಂದ್ರ ಸಹದನ್;ಹೋಮ್ ಯುನೈಟೆಡ್;7

2005;ಮಯ್ಯದ್ ಸಲೀಂ;ಹೋಮ್ ಯುನೈಟೆಡ್;9

2006;ಮೊಹಮ್ಮದ್ ಶೆಲ್ಬಯ್;ಅಲ್ ವೆಹ್ದತ್;8

2007;ಒಡಯ್ ಸಫಿ;ಶಹಾಬ್ ಒರ್ದುನ್;5

2008;ರಿಕೊ;ಅಲ್ ಮುಹರಕ್;19

2009;ರಾಬರ್ಟ್ ಅಕರುಯೆ;ಬುಸೈಟಿನ್;8

2010;ಅಫೊನ್ಸೊ ಆಲ್ವಸ್;ಅಲ್ ರಯಾನ್;9

2011;ಇವಾನ್ ಬೋಸ್ಕೊವಿಚ್;ನಸಫ್ ಕ್ವಾರ್ಷಿ;10

2012;ಅಮ್ಜದ್ ರಾದಿ;ಎರ್ಬಿಲ್;9

2013;ಐಸಮ್ ಜೆಮಾ;ಅಲ್ ಕುವೈತ್;16

2014;ಜುವಾನ್ ಬೆಲೆಂಕೊಸೊ;ಕಿಚೀ;11

2015;ಡ್ಯಾನಿಯಲ್ ಮೆಕ್‌ಬ್ರೀನ್;ಸೌತ್ ಚೈನಾ;8

2016;ಹಮಾದಿ ಅಹಮ್ಮದ್;ಅಲ್ ಕುವಾ;16

2017;ಕಿಮ್ ಯೂ ಸಾಂಗ್;ಏಪ್ರಿಲ್ 25;9

2018;ಅನ್ ಇ ಬೊಮ್;ಏಪ್ರಿಲ್ 25;12

2019;ಬೀನ್ವಿ ಮರನಾನ್;ಸೆರೀಸ್ ನೆಗ್ರೊಸ್;10

ಗರಿಷ್ಠ ಗೋಲು ಗಳಿಸಿದವರು

ಆಟಗಾರ;ದೇಶ;ಕ್ಲಬ್‌ಗಳು;ಗೋಲು

ಅಲೆಕ್ಸಾಂಡರ್ ಡ್ಯೂರಿಚ್;ಸಿಂಗಪುರ;3;32

ಅಮ್ಜದ್ ರಾದಿ;ಇರಾಕ್;2;32

ರಿಕೊ;ಬ್ರೆಜಿಲ್;3;32

ಮಹಮೂದ್ ಶೆಲ್ಬೆ;ಜೋರ್ಡನ್;1;31

ಬದರ್ ಅಲಿ;ಕುವೈತ್;1;30

ಬೀನ್ವೆನಿಡೊ;ಸ್ಪೇನ್;1;30

ಅಲಿ ಅಶ್ರಫ್;ಮಾಲ್ಡಿವ್ಸ್;3;29

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.