ಭಾನುವಾರ, ಜೂಲೈ 12, 2020
22 °C

ಒಂದೇ ಫುಟ್‌ಬಾಲ್‌ ಕ್ಲಬ್‌ನ 25 ಮಂದಿಗೆ ಸೋಂಕು

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಉಕ್ರೇನಿನ ಫುಟ್‌ಬಾಲ್‌ ಕ್ಲಬ್‌ವೊಂದರ ಸಿಬ್ಬಂದಿ ಹಾಗೂ ಆಟಗಾರರು ಸೇರಿ 25 ಮಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ.

‘ಕರ್ಪಾಟಿ ಎಲ್‌ವಿವ್‌ ಕ್ಲಬ್‌ನ 65 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅದರಲ್ಲಿ 25 ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ’ ಎಂದು ಉಕ್ರೇನ್‌ ಫುಟ್‌ಬಾಲ್‌ ಅಸೋಸಿಯೇಷನ್‌ ತಿಳಿಸಿದೆ. ಹೋದ ವಾರ ಕರ್ಪಾಟಿ ತಂಡವನ್ನು ಹೊರಗಿಟ್ಟು ಲೀಗ್‌ ಆರಂಭಿಸಲಾಗಿತ್ತು.

ಉಕ್ರೇನಿಯನ್‌ ಲೀಗ್‌ನ ಎರಡು ಪಂದ್ಯಗಳನ್ನು ಮುಂದೂಡಲಾಗಿದೆ.

‘ಸೋಂಕು ದೃಢಪಟ್ಟ ಪ್ರತಿಯೊಬ್ಬರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗುವುದು. ಎರಡು ವಾರಗಳ ಕಾಲ ತಂಡಕ್ಕೆ ತರಬೇತಿ ಇರುವುದಿಲ್ಲ’ ಎಂದು ಕರ್ಪಾಟಿ ಹೇಳಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು