ಪುರುಷರ ಪಂದ್ಯಕ್ಕೆ ಮಹಿಳಾ ರೆಫರಿಗಳು

ಸೋಮವಾರ, ಮೇ 27, 2019
27 °C

ಪುರುಷರ ಪಂದ್ಯಕ್ಕೆ ಮಹಿಳಾ ರೆಫರಿಗಳು

Published:
Updated:

ಕ್ವಾಲಾಲಂಪುರ (ಎಎಫ್‌ಪಿ): ಫುಟ್‌ಬಾಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪುರುಷರ ಪಂದ್ಯದಲ್ಲಿ ಮಹಿಳೆಯರು ರೆಫರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ವಿಷಯವನ್ನು ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಮಂಗಳವಾರ ತಿಳಿಸಿದೆ.

ಬುಧವಾರ ತುವುನ್ನಾ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಎಎಫ್‌ಸಿ ಕಾಂಟಿನೆಂಟಲ್‌ ಕ್ಲಬ್‌ ಕಪ್‌ ಫುಟ್‌ಬಾಲ್ ಪಂದ್ಯದಲ್ಲಿ ಮ್ಯಾನ್ಮರ್‌ನ ಯಾಂಗೊನ್‌ ಯುನೈಟೆಡ್‌ ಮತ್ತು ಕಾಂಬೋಡಿಯಾದ ನಾಗಾ ವರ್ಲ್ಡ್‌ ತಂಡಗಳು ಮುಖಾಮುಖಿಯಾಗಲಿವೆ.

ಈ ಹೋರಾಟದಲ್ಲಿ ಜಪಾನ್‌ನ ಯೋಶಿಮಿ ಯಮಶಿಟಾ, ಮಕೋಟೊ ಬೊಜೊನಾ ಮತ್ತು ನವೊಮಿ ತೆಶಿರೊಗಿ ಅವರು ರೆಫರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

‘ಎಎಫ್‌ಸಿ ಕ್ಲಬ್‌ ಪಂದ್ಯವೊಂದರಲ್ಲಿ ಇದೇ ಮೊದಲ ಸಲ ಮೂರು ಮಂದಿ ಮಹಿಳಾ ರೆಫರಿಗಳು ಕಾರ್ಯನಿರ್ವಹಿಸಲಿದ್ದಾರೆ. ಏಷ್ಯಾದ ಫುಟ್‌ಬಾಲ್‌ ಮಟ್ಟಿಗೆ ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ಎಎಫ್‌ಸಿ ಪ್ರಕಟಣೆ ತಿಳಿಸಿದೆ.

‘ಕನಸು ನನಸಾದ ದಿನವಿದು. ಪುರುಷರ ಪಂದ್ಯದಲ್ಲಿ ರೆಫರಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸೌಭಾಗ್ಯ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ’ ಎಂದು ಯಮಶಿಟಾ ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !