ಬುಧವಾರ, ಫೆಬ್ರವರಿ 26, 2020
19 °C
ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ಲೀಗ್‌

ಕ್ರಿಪ್‌ಶಾ–ಗೋಕುಲಂ ಫೈನಲ್‌ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕ್ರಿಪ್‌ಶಾ ಎಫ್‌ಸಿ ಮತ್ತು ಗೋಕುಲಂ ಎಫ್‌ಸಿ ಕೇರಳ ತಂಡಗಳು ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಈ ಪಂದ್ಯ ನಡೆಯಲಿದೆ.

ಸೋಮವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಕ್ರಿಪ್‌ಶಾ ಎಫ್‌ಸಿ 3–1 ಗೋಲುಗಳಿಂದ ಕೆಂಕ್ರೆ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಕ್ರಿಪ್‌ಶಾ ತಂಡದ ರತನ್‌ಬಾಲಾ ದೇವಿ 18 ಮತ್ತು 38ನೇ ನಿಮಿಷಗಳಲ್ಲಿ ಗೋಲು ಬಾರಿಸಿ ತಂಡಕ್ಕೆ 2–0 ಮುನ್ನಡೆ ತಂದುಕೊಟ್ಟರು. 43ನೇ ನಿಮಿಷದಲ್ಲಿ ಜ್ಯೋತಿ, ಚೆಂಡನ್ನು ಗುರಿ ಸೇರಿಸಿದ್ದರಿಂದ ಕೆಂಕ್ರೆ ತಂಡದ ಹಿನ್ನಡೆ 1–2ಕ್ಕೆ ತಗ್ಗಿತು.

ದ್ವಿತೀಯಾರ್ಧದಲ್ಲಿ ಕ್ರಿಪ್‌ಶಾ ತಂಡ ಇನ್ನಷ್ಟು ಪರಿಣಾಮಕಾರಿಯಾಗಿ ಆಡಿತು. ಅಸೆಮ್‌ ರೋಜಾ ದೇವಿ 62ನೇ ನಿಮಿಷದಲ್ಲಿ ಕಾಲ್ಚಳಕ ತೋರಿ ತಂಡದ ಸಂಭ್ರಮಕ್ಕೆ ಕಾರಣರಾದರು.

ನಾಲ್ಕರ ಘಟ್ಟದ ಮತ್ತೊಂದು ಪೈಪೋಟಿಯಲ್ಲಿ ಗೋಕುಲಂ ಎಫ್‌ಸಿ 3–0 ಗೋಲುಗಳಿಂದ ಹಾಲಿ ಚಾಂಪಿಯನ್‌ ಸೇತು ಎಫ್‌ಸಿಗೆ ಆಘಾತ ನೀಡಿತು.

ಗೋಕುಲಂ ತಂಡದ ಮನೀಷಾ 21ನೇ ನಿಮಿಷದಲ್ಲಿ ಗೋಲು ಗಳಿಸಿ ಗಮನ ಸೆಳೆದರು. ಬಳಿಕ ಸಬಿತ್ರಾ ಭಂಡಾರಿ ಮೋಡಿ ಮಾಡಿದರು. ಅವರು 44 ಮತ್ತು 84ನೇ ನಿಮಿಷಗಳಲ್ಲಿ ಗೋಲು ದಾಖಲಿಸಿ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು