ಭಾನುವಾರ, ಜುಲೈ 3, 2022
24 °C

IND vs ENG: ರೋಹಿತ್, ಗಿಲ್ ವಿಕೆಟ್ ಪತನ; ಭೋಜನ ವಿರಾಮಕ್ಕೆ ಭಾರತ 59/2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಗ್ಲೆಂಡ್ ತಂಡದ 578 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರ  ನೀಡುತ್ತಿರುವ ಟೀಮ್ ಇಂಡಿಯಾ, ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಆರಂಭಿಕ ವೈಫಲ್ಯಕ್ಕೊಳಗಾಗಿದ್ದು, ಊಟದ ವಿರಾಮದ ಹೊತ್ತಿಗೆ 14 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 59 ರನ್ ಪೇರಿಸಿದೆ. 

ಭಾರತದ ಆರಂಭ ಉತ್ತಮವಾಗಿರಲಿಲ್ಲ. ಇಂಗ್ಲೆಂಡ್‌ನ ಇನ್ ಫಾರ್ಮ್ ವೇಗದ ಬೌಲರ್ ಜೋಫ್ರಾ ಆರ್ಚರ್ ಭಾರತ ತಂಡವು 44 ರನ್ ಪೇರಿಸುವಷ್ಟರಲ್ಲಿ ಡಬಲ್ ಆಘಾತ ನೀಡಿದರು. 

ಅನುಭವಿ ರೋಹಿತ್ ಶರ್ಮಾ (6) ಬೇಗನೇ ನಿರ್ಗಮಿಸಿದರೆ ಯುವ ಶುಭಮನ್ ಗಿಲ್ (29) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗದೇ ನಿರಾಸೆ ಅನುಭವಿಸಿದರು. 28 ಎಸೆತಗಳನ್ನು ಎದುರಿಸಿದ ಗಿಲ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳು ಸೇರಿದ್ದವು. 

ಈಗ ಕ್ರೀಸಿನಲ್ಲಿರುವ ಚೇತೇಶ್ವರ ಪೂಜಾರ (20*) ಹಾಗೂ ನಾಯಕ ವಿರಾಟ್ ಕೊಹ್ಲಿ (4*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಓಪನರ್‌‌ಗಳ ವಿಕೆಟ್ ಕಳೆದುಕೊಂಡಿರುವ ಭಾರತ ಈಗ 519 ರನ್‌ಗಳ ಹಿನ್ನೆಡೆಯಲ್ಲಿದೆ.

ಇದನ್ನೂ ಓದಿ: 

ಈ ಮೊದಲು ಎಂಟು ವಿಕೆಟ್ ನಷ್ಟಕ್ಕೆ 555 ಎಂಬ ಮೊತ್ತದಿಂದ ಮೂರನೇ ದಿನದಾಟ ಮುಂದುವರಿಸಿದ ಆಂಗ್ಲರ ಪಡೆ ಮತ್ತಷ್ಟು 23 ರನ್ ಪೇರಿಸುವುದರೊಳಗೆ ಉಳಿದಿರುವ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಮೂಲಕ 190.1 ಓವರ್‌ಗಳಲ್ಲಿ 578 ರನ್‌ಗಳಿಗೆ ಆಲೌಟ್ ಆಯಿತು. 

ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ನಾಯಕ ಜೋ ರೂಟ್ ಸ್ಮರಣೀಯ ದ್ವಿಶತಕ (218) ಸಾಧನೆ ಮಾಡಿದ್ದರು. ಈ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರವಾಗಿದ್ದರು. ಅಷ್ಟೇ ಅಲ್ಲದೆ 98, 99 ಹಾಗೂ 100ನೇ ಟೆಸ್ಟ್ ಪಂದ್ಯಗಳಲ್ಲಿ ಶತಕ ಮಾಡಿದ ಗೌರವಕ್ಕೂ ಭಾಜನವಾಗಿದ್ದರು. 

ಆರಂಭಿಕ ಡಾಮಿನಿಕ್ ಸಿಬ್ಲಿ (87) ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್ (82) ಅರ್ಧಶತಕಗಳನ್ನು ಬಾರಿಸಿ ಇಂಗ್ಲೆಂಡ್ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. 

ಇದನ್ನೂ ಓದಿ: 

ಭಾರತದ ಪರ ಜಸ್‌ಪ್ರೀತ್ ಬೂಮ್ರಾ ಹಾಗೂ ಆರ್. ಅಶ್ವಿನ್ ತಲಾ ಮೂರು ಮತ್ತು ಇಶಾಂತ್ ಶರ್ಮಾ ಮತ್ತು ಶಹಬಾಜ್ ನದೀಂ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು