ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಐಐಪಿ ಕಬಡ್ಡಿ ಲೀಗ್‌: ಬೆಂಗಳೂರಿನಲ್ಲಿ ನಾಕೌಟ್ ಹಂತದ ಹಣಾಹಣಿ

Last Updated 11 ಮೇ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್ (ಐಐಪಿಕೆಎಲ್‌) ಮೇ 13ರಂದು ಉದ್ಘಾಟನೆಯಾಗಲಿದೆ ಎಂದು ಲೀಗ್‌ನ ನಿರ್ದೇಶಕ ರವಿಕಿರಣ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೇ 23ರವರೆಗೆ ಮೊದಲ ಲೆಗ್‌ನ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ. ಎರಡನೇ ಲೆಗ್‌ ಪಂದ್ಯಗಳು ಮೈಸೂರಿ ನಲ್ಲಿ ಮೇ 24ರಿಂದ 29ರವರೆಗೆ ನಡೆಯಲಿವೆ. ಜೂನ್‌ 1ರಿಂದ 4ರವರೆಗೆ ಸೆಮಿಫೈನಲ್‌, ಫೈನಲ್‌ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ’ ಎಂದು ಅವರು ವಿವರಿಸಿದರು.

ಇಂಡೊ ಇಂಟರ್‌ನ್ಯಾಷನಲ್‌ ನ್ಯೂ ಕಬಡ್ಡಿ ಫೆಡರೇಶನ್‌ ಹಾಗೂ ಡಿ ಸ್ಪೋರ್ಟ್ಸ್‌ ಆಶ್ರಯದಲ್ಲಿ ಟೂರ್ನಿ ನಡೆಯುತ್ತಿದೆ. ಚೊಚ್ಚಲ ಲೀಗ್‌ನಲ್ಲಿ ವಿವಿಧ ದೇಶಗಳಿಂದ ಒಟ್ಟು 160 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ರಾಜ್ಯದ 13 ಮಂದಿ ಇದ್ದಾರೆ. ದಿಲರ್‌ ದಿಲ್ಲಿ, ತೆಲುಗು ಬುಲ್ಸ್‌, ಮುಂಬೈ ಚೆ ರಾಜೇ, ಪುಣೆ ಪ್ರೈಡ್‌, ಬೆಂಗಳೂರು ರೈನೋಸ್‌, ಹರಿಯಾಣ ಹೀರೋಸ್‌, ಪಾಂಡಿಚೇರಿ ಪ್ರಿಡಿಯೇಟರ್ಸ್‌ ಹಾಗೂ ಚೆನ್ನೈ ಚಾಲೆಂಜರ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಪ್ರಶಸ್ತಿ ವಿಜೇತ ತಂಡ 1.25 ಕೋ.ರೂ. ಹಾಗೂ ರನ್ನರ್‌ ಅಪ್‌ ತಂಡವು75 ಲಕ್ಷ ರೂ. ಪಡೆಯಲಿದೆ ಎಂದರು.

ಹಿರಿಯ ಆಟಗಾರ ಸಿ.ಹೊನ್ನಪ್ಪಗೌಡ ‘ಐಐಪಿಕೆಎಲ್‌ನಲ್ಲಿ ನೈಜ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು. ಭಾರತದ ದೇಶಿ ಕ್ರೀಡೆಯು ಒಲಿಂಪಿಕ್‌ಗೆ ಸೇರಬೇಕೆಂಬುದು ನಮ್ಮ ಬಯಕೆಯಾಗಿದ್ದು ಇದಕ್ಕಾಗಿ ಗ್ರಾಮೀಣ ಪ್ರತಿಭೆಗಳಿಗೆ ಲೀಗ್‌ನಲ್ಲಿ ಅವಕಾಶ ನೀಡಲಾಗಿದೆ’ ಎಂದರು.

ರಾಷ್ಟ್ರೀಯ ತಂಡದ ಆಯ್ಕೆ ಕುರಿತು ಹೊನ್ನಪ್ಪಗೌಡ ಅಸಮಾಧಾನ ವ್ಯಕ್ತಪಡಿಸಿದರು. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕಾದ ಪುರುಷರ ತಂಡ ಕಂಚಿಗೆ ತೃಪ್ತಿಪಟ್ಟಿತು. ಮಹಿಳಾ ತಂಡವೂ ಚಾಂಪಿಯನ್‌ ಪಟ್ಟ ಧರಿಸ ಲಿಲ್ಲ. ಪ್ರತಿಭಾನ್ವಿತ ಆಟಗಾರರ ಆಯ್ಕೆ ನಡೆಯುತ್ತಿಲ್ಲ ಎಂದು ಬೇಸರಿಸಿದರು.

ಸುದ್ದಿಗೋಷ್ಠಿಯಲ್ಲಿ ಐಐಪಿಕೆಎಲ್‌ನ ಕಾರ್ಯಕಾರಿ ಅಧಿಕಾರಿ ನವೀನ್‌ ಜಾವಗಲ್‌ ಹಾಗೂ ಮಾರಿಷಸ್‌ನ ಕಬಡ್ಡಿ ಆಟಗಾರ ಜೊನಾಥನ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT