ಬೆಂಗಳೂರು: ವಿಶ್ವ ಚೆಸ್ ಚಾಂಪಿಯನ್ಷಿಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ಕೀರ್ತಿಗೆ ಭಾರತದ ಡಿ. ಗುಕೇಶ್ ಭಾಜನರಾಗಿದ್ದಾರೆ.

ಆ ಮೂಲಕ ಗುಕೇಶ್, 11ರ ಹರೆಯದಲ್ಲೇ ತಾನಾಡಿದ ಮಾತನ್ನು ಸಾಧಿಸಿ ತೋರಿಸಿದ್ದಾರೆ.

ಈ ಸಂಬಂಧ ಗುಕೇಶ್ ಅವರ ಹಳೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಏನಿದೆ?

ಏಳು ವರ್ಷಗಳ ಹಿಂದೆ ಗುಕೇಶ್ ನೀಡಿದ ಸಂದರ್ಶನದ ವಿಡಿಯೊ ಇದಾಗಿದೆ. ನಿನ್ನ ಗುರಿ ಏನು ಎಂದು ಗುಕೇಶ್ ಅವರನ್ನು ಕೇಳಲಾಗುತ್ತದೆ. ಆಗ ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಗೆಲ್ಲುವ ಕನಸನ್ನು ಬಿಚ್ಚಿಡುತ್ತಾರೆ.

ಈಗ 18ರ ಹರೆಯದಲ್ಲೇ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ. ಆ ಮೂಲಕ ಕನಸು ನನಸಾಗಿದೆ.

ಫೈನಲ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿ ಗುಕೇಶ್ ಚಾಂಪಿಯನ್ ಆದರು. ಐದು ಬಾರಿಯ ಚಾಂಪಿಯನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್ಷಿಪ್ ಗೆದ್ದ ಭಾರತೀಯ ಆಟಗಾರ ಎನಿಸಿದ್ದಾರೆ.
.ಗುಕೇಶ್ ವಿಶ್ವ ಚೆಸ್ ಚಾಂಪಿಯನ್; ಉಕ್ಕಿ ಬಂದ ಆನಂದದ ಕಣ್ಣೀರು.PHOTOS | ವಿಶ್ವ ಚೆಸ್ ಚಾಂಪಿಯನ್ಷಿಪ್ ಗೆದ್ದ ಅತಿ ಕಿರಿಯ ಆಟಗಾರ ಗುಕೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.