ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾಡ್ಜ್‌ಬಾಲ್ ಚಾಂಪಿಯನ್‌ಷಿಪ್‌: ರಾಜ್ಯ ತಂಡಕ್ಕೆ ವಿಶ್ರುತ್‌, ವಂದನಾ ಸಾರಥ್ಯ

Published : 1 ಜನವರಿ 2024, 13:39 IST
Last Updated : 1 ಜನವರಿ 2024, 13:39 IST
ಫಾಲೋ ಮಾಡಿ
Comments

ಬೆಂಗಳೂರು: ವಿಶ್ರುತ್ ಎಸ್. ಮತ್ತು ವಂದನಾ ಪಿ. ಗೌಡ ಅವರು ಇದೇ 5ರಿಂದ 7ರವರೆಗೆ ಹರಿಯಾಣದಲ್ಲಿ ನಡೆಯಲಿರುವ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಜೂನಿಯರ್‌ ಬಾಲಕ ಮತ್ತು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.

ರಾಷ್ಟ್ರೀಯ ಟೂರ್ನಿಯಲ್ಲಿ ಪ್ರತಿನಿಧಿಸುವ ರಾಜ್ಯ ತಂಡವನ್ನು ಕರ್ನಾಟಕ ರಾಜ್ಯ ಡಾಡ್ಜ್‌ಬಾಲ್ ಸಂಸ್ಥೆಯು ​​ಸೋಮವಾರ ಪ್ರಕಟಿಸಿದೆ.

ಜೂನಿಯರ್ ಬಾಲಕರು: ವಿಶ್ರುತ್ ಎಸ್. (ನಾಯಕ), ಸುನಿಲ್ ಕುಮಾರ್ ಕೆ. (ಉಪನಾಯಕ), ಕೆನೆತ್ ಕೆ. ಸಾಜಿ, ತರುಣ್ ಕೆ, ದ್ರುಪದ್ ದೇವ್ ಬಿ.ಪಿ, ಪೃಥ್ವಿಕ್ ಯು, ಪ್ರಥಮ್ ಎಸ್. ಗೌಡ, ಸುಪ್ರಿತ್ ಸಿ. ಭಾಲಿ, ಮನೀಶ್, ತನುರಾಮ್ ಆರ್, ಕುಶಾಲ್ ಪಿ.ವಿ, ಶುಭೋದಯ ಎಸ್. (ಕೋಚ್- ಸಂಪತ್ ಮತ್ತು ಟೀಂ ಮ್ಯಾನೇಜರ್- ವಿಜೇತ್ ಕುಮಾರ್)

ಜೂನಿಯರ್ ಬಾಲಕಿಯರು: ವಂದನಾ ಪಿ. ಗೌಡ (ನಾಯಕ), ಪೂರ್ವಿ ಅಶೋಕ್ ಅಂಗಡಿ (ಉಪನಾಯಕಿ), ವಿ. ಪ್ರಗತಿ, ನೇಹಾ ಕುಮಾರಿ, ಶ್ರೇಯಾ ಶೆಣೈ, ಎಸ್. ವಿನಿತಾ, ಯುಕ್ತ ಜಿ.ಎಂ, ಮೋನಿಶಾ ಎ, ತನುಷ್ಕಾ, ಖುಷ್ಬು (ತಂಡದ ವ್ಯವಸ್ಥಾಪಕಿ- ಭೂಮಿಕಾ)

ಸಬ್ ಜೂನಿಯರ್ ಬಾಲಕರು: ಭರತ್ ವಿ.ಬಿ (ನಾಯಕ), ಜೆ.ನೂತನ್ ಗೌಡ (ಉಪನಾಯಕ), ಹರ್ಷ ಗೌಡ, ವಿಶ್ವ ಐ.ಎಂ, ದೀಕ್ಷಿತ್, ಪಿ.ಕಾರ್ತಿಕ್, ಕಂಪಲ್ಲಿ ಮೊಹ್ನೀಶ್, ವಿನಯ್ ಎಂ, ನಿಶಾಂತ್ ಎನ್.ಎಸ್, ಸಮರ್ಥ್ ಬಿ, ಧನುಷ್ ಆರ್, ತರುಣ್ ಎಂ. (ಕೋಚ್ – ರಾಘವೇಂದ್ರ)

ಸಬ್ ಜೂನಿಯರ್ ಬಾಲಕಿಯರು: ವರ್ಷಾ ರಾಜ್ (ನಾಯಕಿ), ನೇಹಾ ಕುಮಾರಿ (ಉಪನಾಯಕಿ), ವರ್ಷಿತಾ ಎನ್, ಈಶಾನ್ಯಾ ಆರ್, ಲೀಶಾ ಡಿ. ಚವಾಣ್, ಆಧ್ಯಶ್ರೀ, ಕುಂದವಿ ಕೆ, ದೀಪಿಕಾ, ಶೈಲಶ್ರೀ ಆರ್.ಜಿ, ರಾಜೇಶ್ವರಿ ಕನಕರಡ್ಡಿ, ವರ್ಣಿತಾ ಎಂ.ಎ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT