ಗುಕೇಶ್ ಇದುವರೆಗೆ ಆರು ಪಂದ್ಯಗಳಲ್ಲಿ ಐದು ಗೆದ್ದು, ಒಂದು ಡ್ರಾ ಮಾಡಿಕೊಂಡಿದ್ದಾರೆ. ಉಳಿದ ಮೂರು ಪಂದ್ಯಗಳು ಡ್ರಾ ಆದವು. ಪ್ರಜ್ಞಾನಂದ ಎರಡನೇ ಬೋರ್ಡ್‌ನಲ್ಲಿ ಯು ಯಾಂಗ್ವಿ ವಿರುದ್ಧ ಮೊದಲಿಗರಾಗಿ ಡ್ರಾ ಮಾಡಿಕೊಂಡರು. ಹರಿಕೃಷ್ಣ ಅವರು ವಾಂಗ್ ಯು ವಿರುದ್ಧ ಡ್ರಾ ಮಾಡಿಕೊಂಡರು. ಅರ್ಜುನ್ ಇರಿಗೇಶಿ ಹೋರಾಟ ತೋರಿದರೂ, ಬು ಷಿಯಾಂಗ್ಜಿ ಜೊತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ಓಪನ್ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಭಾರತ ಅಗ್ರಸ್ಥಾನ ಉಳಿಸಿಕೊಂಡಿದೆ.