ಮಡಿಕೇರಿ: ಕಲಿಯಂಡ ಮತ್ತು ಕರವಂಡ ತಂಡಗಳು ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ‘ಮುದ್ದಂಡ ಕಪ್’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಭಾನುವಾರದ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದವು.

ದೇಶ್ ಮುತ್ತಣ್ಣ ಹಾಗೂ ಕಿರಣ್ ಅವರ ತಲಾ 2 ಗೋಲು, ದಿವಿನ್, ಮಾಚಯ್ಯ, ಚಂಗಪ್ಪ ಅವರ ತಲಾ 1 ಗೋಲಿನ ನೆರವಿನಿಂದ ಕಲಿಯಂಡ ತಂಡವು ಉದ್ದಿನಾಡಂಡ ತಂಡವನ್ನು 7–0 ಅಂತರದಿಂದ ಮಣಿಸಿತು.

ಮತ್ತೊಂದು ಪಂದ್ಯದಲ್ಲಿ ಕರವಂಡ ತಂಡವು 6–0 ಅಂತರದಿಂದ ಕಳ್ಳಿರ ತಂಡವನ್ನು ಸೋಲಿಸಿತು. ಕೌಶಿಕ್ ಪೂಣಚ್ಚ 2, ಕಿಶನ್ ಸೋಮಯ್ಯ, ದರ್ಶನ್ ದೇವಯ್ಯ, ಅಪ್ಪಚ್ಚು ಹಾಗೂ ಕವನ್ ಪೂವಯ್ಯ ತಲಾ 1 ಗೋಲು ಹೊಡೆದರು.

ಅಪ್ಪನೆರವಂಡ 4–3ಯಿಂದ ಮೊಳ್ಳೇರ ವಿರುದ್ಧ, ತಂಬುಕುತ್ತೀರ 1–0ಯಿಂದ ಕಳ್ಳಂಗಡ ವಿರುದ್ಧ, ಮಲ್ಲಂಗಡ 3–0ಯಿಂದ ಸಿದ್ದಂಡ ವಿರುದ್ಧ, ಕೈಪಟ್ಟಿರ 3–0ಯಿಂದ ಬೈರಾಜಂಡ ವಿರುದ್ಧ, ಮೇವಡ 1–0ಯಿಂದ ಅರಮಣಮಾಡ ವಿರುದ್ಧ, ಕೇಲೇಟಿರ 3–2ರಿಂದ ಚೆಯ್ಯಂಡ ವಿರುದ್ಧ, ಆದೇಂಗಡ 4–0ಯಿಂದ ಪುಗ್ಗೇರ ವಿರುದ್ಧ, ನಾಪಂಡ 3–2ರಿಂದ ಪುಚ್ಚಿಮಾಡ ವಿರುದ್ಧ, ಕೊಟೇರ 1–0ಯಿಂದ ಕಾಳೆಂಗಡ ವಿರುದ್ಧ, ಕುಪ್ಪಂಡ (ನಾಂಗಾಲ) 1–0ಯಿಂದ ಕಂಗಂಡ ವಿರುದ್ಧ ಗೆಲುವು ಸಾಧಿಸಿದವು.

ಶಾಂತೆಯಂಡ 5–1ರಿಂದ ಚೆಟ್ಟಿಯಾರಂಡ ವಿರುದ್ಧ, ಮರ್ಚಂಡ 1–0ಯಿಂದ ಅಚ್ಚಪಂಡ ವಿರುದ್ಧ, ಕರಿನೆರವಂಡ 3–0 ಯಿಂದ ಕನ್ನಿಕಂಡ ವಿರುದ್ಧ, ಬಯವಂಡ 2–1ರಿಂದ ಕೊಣಿಯಂಡ ವಿರುದ್ಧ, ಮುಕ್ಕಾಟಿರ (ಹರಿಹರ) 1–0ಯಿಂದ ಮುಕ್ಕಾಟಿರ (ದೊಡ್ಡಪುಲಿಕೋಟು) ವಿರುದ್ಧ, ಕಳ್ಳಿಚಂಡ 2–0ಯಿಂದ ಮಣವಟ್ಟಿರ ವಿರುದ್ಧ ಗೆಲುವು ಸಾಧಿಸಿದವು.

ಟೈಬ್ರೇಕರ್ ಹಣಾಹಣಿಯಲ್ಲಿ ಕುಮ್ಮಂಡ 4–2ರಿಂದ ಪಾಂಡಂಡ ವಿರುದ್ಧ ಹಾಗೂ ಚೀರಂಡ ತಂಡ 4–3ರಿಂದ ಮೊಣ್ಣಂಡ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.