ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಹತಾ ವ್ಯವಸ್ಥೆಯಲ್ಲಿ ಮಾರ್ಪಾಡು: ಭಾರತ ಅಥ್ಲೆಟಿಕ್‌ ಫೆಡರೇಷನ್

Published : 11 ಸೆಪ್ಟೆಂಬರ್ 2024, 16:06 IST
Last Updated : 11 ಸೆಪ್ಟೆಂಬರ್ 2024, 16:06 IST
ಫಾಲೋ ಮಾಡಿ
Comments

ಚೆನ್ನೈ: ಭಾರತ ಅಥ್ಲೆಟಿಕ್‌ ಫೆಡರೇಷನ್ (ಎಎಫ್‌ಐ) ಮುಂದಿನ ವರ್ಷದಿಂದ ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧಾಕೂಟಗಳಿಗೆ ಅರ್ಹತಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲಿದೆ. ದೇಶೀಯ ಕೂಟಗಳ ಸ್ವರೂಪದಲ್ಲೂ ಪುನಾರಚನೆ ಆಗಲಿದೆ ಎಂದು ಅಧ್ಯಕ್ಷ ಅದಿಲ್ ಸುಮರಿವಾಲಾ ಬುಧವಾರ ಇಲ್ಲಿ ತಿಳಿಸಿದರು.

ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸ್ಯಾಫ್‌ ಜೂನಿಯರ್ ಅಥ್ಲೆಟಿಕ್ ಕೂಟದ ಸಂದರ್ಭದಲ್ಲಿ ಮಾಧ್ಯಮ ಸಂವಾದದಲ್ಲಿ ಮಾಗತನಾಡಿದ ಅವರು, ಅಥ್ಲೀಟುಗಳು ಸಕಾಲದಲ್ಲಿ ತಮ್ಮ ಪ್ರದರ್ಶನದ ಮಟ್ಟದ ಉತ್ತುಂಗಕ್ಕೆ ಏರಲು ಅವಕಾಶವಾಗುವಂತೆ ಕ್ವಾಲಿಫಿಕೇಷನ್‌ ವ್ಯವಸ್ಥೆಯಲ್ಲಿ ಪುನರ್ರಚನೆ ತರಲಾಗುವುದು ಎಂದರು.

ಜುಲೈ– ಆಗಸ್ಟ್ ತಿಂಗಳಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟುಗಳ ನಿರ್ವಹಣೆಯ ಮಟ್ಟದಲ್ಲಿ ಹಠಾತ್ ಕುಸಿತವಾಗಿರುವುದಕ್ಕೆ ಅವರು ಕಳವಳ ವ್ಯಕ್ತಪಡಿಸಿದರು.

‘ಪ್ರಮುಖ ಅಂತರರಾಷ್ಟ್ರೀಯ ಕೂಟಗಳಿಗೆ ಅರ್ಹತೆ ಗಳಿಸಬೇಕಾದರೆ ಅಥ್ಲೀಟುಗಳು ನಿರ್ದಿಷ್ಟ ಸಂಖ್ಯೆಯ ದೇಶಿಯ ಕೂಟಗಳಲ್ಲಿ ಪಾಲ್ಗೊಂಡು ಅಮೂಲ್ಯ ಪಾಯಿಂಟ್‌ಗಳನ್ನು ಸಂಪಾದಿಸಬೇಕಾಗುತ್ತದೆ. ಸ್ಥಿರ ಪ್ರದರ್ಶನ ನೀಡಿದವರಿಗೆ ಪ್ರಮುಖ ಕೂಟಗಳಿಗೆ ಅರ್ಹತೆ ಪಡೆಯಲು ಅನುಕೂಲವಾಗುತ್ತದೆ’ ಎಂದು ಸುಮರಿವಾಲಾ ವಿವರಿಸಿದರು.

ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಮತ್ತು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್ ಮುಂದಿನ ವರ್ಷ ನಿಗದಿಯಾಗಿರುವ ಎರಡು ಪ್ರಮುಖ ಅಂತರರಾಷ್ಟ್ರೀಯ ಕೂಟಗಳಾಗಿವೆ.

ಮುಂದಿನ ಋತುವಿನಿಂದ ಕಡೇಪಕ್ಷ 30 ದೇಶಿಯ ಅಥ್ಲೆಟಿಕ್ ಕೂಟಗಳನ್ನು ಆಯೋಜಿಸುವ ಯೋಜನೆ ಫೆಡರೇಷನ್ ಮುಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT