ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಗೇಮ್ಸ್‌: ಕುಸ್ತಿಪಟುಗಳ ಹೆಸರು ಕಳುಹಿಸಲು ಜುಲೈ 22ರ ಗಡುವು

Published 8 ಜುಲೈ 2023, 22:10 IST
Last Updated 8 ಜುಲೈ 2023, 22:10 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯನ್‌ ಗೇಮ್ಸ್‌ಗೆ ಭಾರತೀಯ ಕುಸ್ತಿಪಟುಗಳ ಹೆಸರನ್ನು ಕಳುಹಿಸಲು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಐಒಎಗೆ ಜುಲೈ 22 ರವರೆಗೆ ಕಾಲಾವಕಾಶ ನೀಡಿದೆ.

ಭಾರತೀಯ ಒಲಿಂಪಿಕ್‌ ಸಮಿತಿ (ಐಒಎ)ಯು ಆಗಸ್ಟ್‌ 5ರವರೆಗೆ ಸಮಯ ಕೇಳಿತ್ತು. ಆದರೆ, ಒಸಿಎ ಜುಲೈ 15 ಅನ್ನು ಗಡುವು ಎಂದು ನಿಗದಿಪಡಿಸಿದೆ. ಸೆ.23ರಿಂದ ಚೀನಾದ ಹ್ಯಾಂಗ್‌ಝೌನಲ್ಲಿ ಏಷ್ಯನ್‌ ಗೇಮ್ಸ್‌ ಪ್ರಾರಂಭವಾಗಲಿದೆ.

ಐಒಎ ಅಧ್ಯಕ್ಷೆ ಪಿಟಿ ಉಷಾ, ಹಿರಿಯ ಉಪಾಧ್ಯಕ್ಷ ಅಜಯ್ ಪಟೇಲ್ ಮತ್ತು ಜಂಟಿ ಕಾರ್ಯದರ್ಶಿ ಕಲ್ಯಾಣ್ ಚೌಬೆ ಅವರು ಬ್ಯಾಂಕಾಕ್‌ನಲ್ಲಿ ನಡೆದ ಒಸಿಎಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ, ವಿಶೇಷ ವಿನಾಯಿತಿಯನ್ನು ಕೇಳಿದರು. ಅದರಂತೆ ಒಂದು ವಾರದ ವಿಸ್ತರಣೆ ದೊರಕಿದೆ.

ವಿನೇಶಾ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಆರು ಪ್ರತಿಭಟನನಿರತ ಕುಸ್ತಿಪಟುಗಳಿಗೆ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಟ್ರಯಲ್‌ಗಳಿಗೆ ತಯಾರಿ ನಡೆಸಲು ಸಾಕಷ್ಟು ಸಮಯವನ್ನು ಒದಗಿಸುವಂತೆ ಗಡುವನ್ನು ವಿಸ್ತರಿಸಲು ಉಷಾ ಅವರು ಒಸಿಎಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT