ಬೆಂಗಳೂರು: 9 ವರ್ಷ ವಯಸ್ಸಿನ ಅಯಾನ್ ಫುಟಾನೆ ಮತ್ತು ರುಚಿರ್ ನಡಿಕಟ್ಲ ಅವರು ಗೋಲ್ಡನ್ ಆರಾ ಕರ್ನಾಟಕ ರಾಜ್ಯ ಅಮೆಚೂರ್ ಚೆಸ್ ಚಾಂಪಿಯನ್ಷಿಪ್ನ ಎಂಟನೇ ಸುತ್ತಿನ ನಂತರ ತಲಾ 7.5 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ನಗರದ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ನಲ್ಲಿ ನಡೆಯುತ್ತಿರುವ ಈ ಚಾಂಪಿಯನ್ಷಿಪ್ನ ಮೂರನೇ ದಿನವಾದ ಶನಿವಾರ ಮೊದಲ ಬೋರ್ಡ್ನಲ್ಲಿ ಆಡಿದ ಎರಡನೇ ಶ್ರೇಯಾಂಕದ ಅಯಾನ್, ವೆಂಕಟನಾಗ ಕಾರ್ತಿಕ್ (6.5) ವಿರುದ್ಧ ಜಯಗಳಿಸಿದ. ಪಕ್ಕದ ಬೋರ್ಡ್ನಲ್ಲಿ ರುಚಿರ್, ಇನ್ನೊಬ್ಬ ಎಳೆಯ ಆಟಗಾರ ಇಶಾನ್ ಎ (6.5) ವಿರುದ್ಧ ಗೆಲುವು ಪಡೆದನು.

ಇನ್ನು ಎರಡು ಸುತ್ತಿನ ಆಟ ಉಳಿದಿದ್ದು ಪೈಪೋಟಿ ಹೆಚ್ಚಿದೆ. ಅಗ್ರ ಶ್ರೇಯಾಂಕದ ನಿರಂಜನ್ ವಾರಿಯರ್ ಮತ್ತು ಬೆಳಗಾವಿಯ ಶ್ರೀಕರ ದರ್ಭಾ ಅವರು ತಲಾ ಏಳು ಪಾಯಿಂಟ್ಸ್ ಗಳಿಸಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಎಂಟನೇ ಸುತ್ತಿನಲ್ಲಿ ನಿರಂಜನ್, ಅಭಿನೀತ್ ಭಟ್ (6) ವಿರುದ್ಧ, ಶ್ರೀಕರ, ಬೆಂಗಳೂರಿನ 9 ವರ್ಷ ವಯಸ್ಸಿನ ಶ್ರೇಯಾನ್ಶ್ ದಾಸ್ ವಿರುದ್ಧ ಜಯಗಳಿಸಿದರು.

ಮೂರನೇ ಶ್ರೇಯಾಂಕದ ವಿವಾನ್ ಸಚದೇವ್ ಸೇರಿದಂತೆ ಹತ್ತು ಮಂದಿ ಆಟಗಾರರು ತಲಾ 6.5 ಪಾಯಿಂಟ್ಸ್ ಗಳಿಸಿದ್ದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ 450ಕ್ಕೂ ಹೆಚ್ಚು ಮಂದಿ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.