ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಪೋಲೊ ಆವೃತ್ತಿ ಇಂದಿನಿಂದ

ದೇಶದ ಪ್ರಮುಖ 9 ತಂಡಗಳು ಭಾಗಿ
Published 6 ಆಗಸ್ಟ್ 2023, 22:52 IST
Last Updated 6 ಆಗಸ್ಟ್ 2023, 22:52 IST
ಅಕ್ಷರ ಗಾತ್ರ

ಬೆಂಗಳೂರು: ಸೋಮವಾರದಿಂದ ಆರಂಭವಾಗುವ ಬೆಂಗಳೂರು ಪೋಲೊ ಆವೃತ್ತಿಯಲ್ಲಿ ದೇಶದ ಪ್ರಮುಖ ತಂಡಗಳು ಪೈಪೋಟಿ ನಡೆಸಲು ಸಜ್ಜಾಗಿವೆ.

‌ಇಂಡಿಯನ್ ಪೊಲೊ ಸಂಸ್ಥೆಯ ಆಶ್ರಯದಲ್ಲಿ ಅಗ್ರಾಂ ರೈಡಿಂಗ್‌ ಮತ್ತು ಪೋಲೊ ಅಕಾಡೆಮಿ (ಎಆರ್‌ಪಿಎ) ಇದರ ನೇತೃತ್ವದಲ್ಲಿ ಬೆಂಗಳೂರಿನ ಎಎಸ್‌ಸಿ ಸೆಂಟರ್‌ ಮತ್ತು ಕಾಲೇಜಿನ ಆಗ್ರಾಂ ಪೋಲೊ ಕ್ರೀಡಾಂಗಣದಲ್ಲಿ ಆ.7ರಿಂದ 27ರವರೆಗೆ ಪೋಲೊ ಪಂದ್ಯಗಳನ್ನು ಆಯೋಜಿಸಲಾಗಿದೆ.

ನಾಲ್ಕು ಕಪ್‌ಗಳ ಪಂದ್ಯಗಳಿಗೆ ಒಟ್ಟು 9 ತಂಡಗಳು ಭಾಗವಹಿಸಲಿವೆ. ಪ್ರತಿದಿನ ಮಧ್ಯಾಹ್ನ 2ಕ್ಕೆ ಪಂದ್ಯಗಳು ಆರಂಭವಾಗಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಆಸಕ್ತರು ಪ್ರವೇಶದ್ವಾರ 1 ಮತ್ತು 5ರಿಂದ ತೆರಳಬಹುದಾಗಿದೆ.

ಭಾನುವಾರ ಟ್ರೋಫಿಗಳ ಅನಾವರಣ, ಮಿಲ್‌ಬ್ಯಾಂಡ್‌ ಪ್ರದರ್ಶನ, ವಿವಿಧ ತಂಡಗಳ ಪರಿಚಯ, ಕುದುರೆ ಸವಾರಿ ಪ್ರದರ್ಶನ ನಡೆಯಿತು.

‘‌ಆ.7ರಿಂದ ಗ್ಯಾನ್‌ಜ್ಯೋತಿ ಪೋಲೊ ಕಪ್‌ ಪಂದ್ಯಗಳು ಆರಂಭವಾಗಲಿದ್ದು, 9ರಂದು ಫೈನಲ್‌ ಪಂದ್ಯ ನಡೆಯಲಿದೆ. ಆ. 10ರಿಂದ ‘ಚಾಲೆಂಜರ್ಸ್ಸ್‌ ಪೋಲೊ ಕಪ್‌’ ಪಂದ್ಯಗಳು ಆರಂಭವಾಗಿ, 13ರಂದು ಫೈನಲ್‌ ನಡೆಯಲಿದೆ. ‘ಒಡೆಯರ್‌ ಪೋಲೊ ಕಪ್‌’ನ ಪಂದ್ಯಗಳು ಆ.14ರಿಂದ ಆರಂಭಗೊಂಡು, 20ರಂದು ಫೈನಲ್‌ ಸ್ಪರ್ಧೆ ಇದೆ. ಆ. 21ರಿಂದ ಬೆಂಗಳೂರು ಚಾಂಪಿಯನ್ಸ್‌ ಪೋಲೊ ಕಪ್‌ ಪಂದ್ಯಗಳು ನಡೆಯಲಿದ್ದು, 27ರಂದು ಪ್ರಶಸ್ತಿ ಸುತ್ತಿನ ಸ್ಪರ್ಧೆ ನಡೆಯಲಿದೆ’ ಎಂದು ಲೆಫ್ಟಿನೆಂಟ್ ಕರ್ನಲ್ ಜಸ್ಪಾಲ್ ಸಿಂಗ್ ನೇಗಿ ಮಾಹಿತಿ ನೀಡಿದರು.

ಎಎಸ್‌ಸಿಯ ಕಮಾಂಡರ್‌ ಬ್ರಿಗೇಡಿಯರ್‌ ಟಿ.ಎಸ್‌. ಮಾನ್‌ ಮಾತನಾಡಿ, ‘ಬೆಂಗಳೂರು ಪೋಲೊ ಆವೃತ್ತಿಯಲ್ಲಿ ಬೆಂಗಳೂರಿಗರು ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು ಎಂಬುದು ನಮ್ಮ ಅಪೇಕ್ಷೆ. ಸಾರ್ವಜನಿಕರು ಅಧಿಕ ಮಂದಿ ಪಂದ್ಯಗಳನ್ನು ವೀಕ್ಷಿಸಿ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಬೇಕು. ಪೋಲೊ ಕ್ರೀಡೆಯಲ್ಲೂ ಯುವ ಪ್ರತಿಭೆಗಳು ಆಸಕ್ತಿ ಬೆಳೆಸಿಕೊಂಡು ದೇಶಕ್ಕಾಗಿ ಕೊಡುಗೆ ನೀಡಬೇಕು’ ಎಂದರು.

=

ಭಾಗವಹಿಸುವ ತಂಡಗಳು

ಆರ್ಮಿ ಸರ್ವಿಸ್ ಕಾಪ್ಸ್

61 ಕ್ಯಾವಲ್ರಿ

ಇಂಡಿಯನ್ ನೇವಿ

ರಿಮೌಂಟ್ ವೆಟರ್ನರಿ ಕಾರ್ಪ್ಸ್

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ

ರೆಜಿಮೆಂಟ್ ಆಫ್ ಆರ್ಟಿಲರಿ

ಹೈದರಾಬಾದ್ ಪೋಲೊ ಅಂಡ್‌ ರೈಡಿಂಗ್‌ ಕ್ಲಬ್‌

ಆರ್ಮಿ ರೈಡಿಂಗ್‌ ಅಂಡ್‌ ಪೋಲೊ ಅಕಾಡೆಮಿ

ಚೆನ್ನೈ ಪೋಲೊ ಟೀಂ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT