ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟಿಸಿಯಲ್ಲಿ ಚಳಿಗಾಲದ ಡರ್ಬಿ ರೇಸ್; ಜಮಾರಿ ಕುದುರೆಗೆ ಪ್ರಶಸ್ತಿ ಗರಿ

ಕಠಿಣ ಪೈಪೋಟಿಯೊಡ್ಡಿದ ಮೇಡಮ್ ರಿಚ್
Published 26 ಜನವರಿ 2024, 20:06 IST
Last Updated 26 ಜನವರಿ 2024, 20:06 IST
ಅಕ್ಷರ ಗಾತ್ರ

ಬೆಂಗಳೂರು: ನಿರೀಕ್ಷೆಯಂತೆ ಜಮಾರಿ ಅಶ್ವವು ಶುಕ್ರವಾರ ನಡೆದ ವಿನ್‌ಫೇರ್ 247 ಚಳಿಗಾಲದ ಡರ್ಬಿ ರೇಸ್‌ನಲ್ಲಿ ಪ್ರಶಸ್ತಿ ಗೆದ್ದಿತು.

ಆದರೆ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ನಡೆದ ಈ ರೇಸ್‌ನಲ್ಲಿ ಜಮಾರಿಗೆ ಗೆಲುವು ಸುಲಭವಾಗಿರಲಿಲ್ಲ. ಕೊನೆಯ ಕ್ಷಣದಲ್ಲಿ ಮೇಡಮ್ ರಿಚ್ ಕುದುರೆಯು ಒಡ್ಡಿದ ನಿಕಟ ಪೈಪೋಟಿಯನ್ನು ಮೀರಿ ನಿಲ್ಲಬೇಕಾಯಿತು. ಆದರೆ ಜಮಾರಿ ಅಶ್ವದ ಜಾಕಿ ಟ್ರೆವರ್ ಪಟೇಲ್ ಅವರ ಚಾಣಾಕ್ಷತೆಯೇ ಮೇಲುಗೈ ಸಾಧಿಸಿತು.

ಹತ್ತು  ಸ್ಪರ್ಧಿಗಳು ಭಾಗವಹಿಸಿದ್ದ 2400 ಮೀಟರ್ಸ್‌ ದೂರದ ಡರ್ಬಿ ರೇಸ್‌ಗೆ ಚಾಲನೆ ದೊರೆತ ಕೂಡಲೇ ಸಮ್‌ಥಿಂಗ್ ರಾಯಲ್‌ ಮುನ್ನುಗ್ಗಿ ಲೀಡ್‌ ಪಡೆಯಿತು.  75/100 ಫೇವರಿಟ್‌ ಆಗಿದ್ದ ಜಮಾರಿ ಕೊನೆಯ 500 ಮೀಟರ್ಸ್‌ ತಿರುವಿನಲ್ಲಿ ತನ್ನ ಎರಡನೇ ಸ್ಥಾನದಿಂದ ಮುನ್ನುಗ್ಗಿ ಲೀಡ್‌ ಪಡೆದು ರೇಸ್‌ನ ಕೊನೆಯ 100 ಮೀಟರ್ಸ್‌ನಲ್ಲಿ ಬಾರಿ ಅಂತರದ ಸುಲಭ ಜಯ ಗಳಿಸುವ ಭರವಸೆ ಮೂಡಿಸಿತ್ತು.

ಆ ಕ್ಷಣದಲ್ಲಿ ಕೊನೆಯ ಸ್ಥಾನದಲ್ಲಿ ಓಡುತ್ತಿದ್ದ ಮೇಡಮ್‌ ರಿಚ್‌ ಬಿರುಗಾಳಿಯಂತೆ ಮುನ್ನುಗಿತು. ಗ್ಯಾಲರಿಗಳಲ್ಲಿ ಕಿಕ್ಕಿರಿದು ಸೇರಿದ್ದ ಜನಸ್ತೋಮದಲ್ಲಿ ಮಿಂಚಿನ ಸಂಚಲನ ಮೂಡಿಸಿತು. ಈ ಹಂತದಲ್ಲಿ ಅನುಭವಿ ಜಾಕಿ ಟ್ರೆವರ್‌ ಪಟೇಲ್‌  ಜಮಾರಿಯ ವೇಗವನ್ನು ಹೆಚ್ಷಿಸಿ,  3/4 ಲೆಂತ್‌ಗಳಿಂದ ದಾಖಲೆಯ ಸಮಯದಲ್ಲಿ (2ನಿಮಿಷ, 28.20ಸೆಕೆಂಡು)  ಗೆಲುವಿನ ಗೆರೆ ದಾಟಿಸಿದರು. ಹೋದ ವರ್ಷದ 2400 ಮೀಟರ್ಸ್‌ ದೂರದ ರೇಸ್‌ನಲ್ಲಿ ಜೂಲಿಯೆಟ್‌ (2ನಿ, 28.40 ನಿಮಿಷ) ಮಾಡಿದ್ದ ದಾಖಲೆಯನ್ನು ಜಮಾರಿ ಮೀರಿತು.

ಪ್ರಥಮ ಬಹುಮಾನವಾದ ₹ 83.72 ಲಕ್ಷ ಮತ್ತು ಎರಡು ಲಕ್ಷ ರೂಪಾಯಿ ಮೌಲ್ಯದ ಸುಂದರ ಟ್ರೋಫಿಯನ್ನು ಜಮಾರಿ ಮಾಲೀಕರಿಗೆ ನೀಡಿ ಗೌರವಿಸಲಾಯಿತು.

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಚಳಿಗಾಲದ ಡರ್ಬಿ ರೇಸ್‌ನಲ್ಲಿ ಪ್ರಶಸ್ತಿ ಗೆದ್ದ ಜಮಾರಿ ಅಶ್ವದ ಜಾಕಿ ಟ್ರೆವರ್ ಪಟೇಲ್  ಬಿಟಿಸಿ ಅಧ್ಯಕ್ಷ ಅರವಿಂದ್ ರಾಘವನ್ ಕುದುರೆ ಮಾಲೀಕರಾದ ರಾಮಶೇಷು ಇಯುನಿ ಅನಿತಾ ಜೆ ಕ್ಯಾಪ್ಟನ್ಸ್  ಕೆ.ಎನ್. ಧುಂಜಿಭಾಯ್ ಡಿ.ಆರ್. ಥಾಕರ್ ಸಿದ್ಧಾರ್ಥ್ ಟ್ರೇನರ್ ಪಿ. ಶ್ರಾಫ್  ಅವರು ಟ್ರೋಫಿಯೊಂದಿಗೆ ಇದ್ದರು

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಚಳಿಗಾಲದ ಡರ್ಬಿ ರೇಸ್ ವೀಕ್ಷಣೆಗೆ ಸೇರಿದ್ದ ಅಭಿಮಾನಿಗಳು

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಚಳಿಗಾಲದ ಡರ್ಬಿ ರೇಸ್ ವೀಕ್ಷಣೆಗೆ ಸೇರಿದ್ದ ಅಭಿಮಾನಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT