ಲಿವರ್ಪೂಲ್: ಯುವ ಬಾಕ್ಸರ್ ಪವನ್ ಬಾರ್ತ್ವಾಲ್ ಅವರು ಗುರುವಾರ ವಿಶ್ವ ಚಾಂಪಿಯನ್ಷಿಪ್ನ ಪುರುಷರ 55 ಕೆಜಿ ವಿಭಾಗದ ಮೊದಲ ಸುತ್ತಿನಲ್ಲಿ ಗೆಲುವಿನೊಂದಿಗೆ ಭಾರತದ ಅಭಿಯಾನಕ್ಕೆ ಚಾಲನೆ ನೀಡಿದರು.

ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಬಾರಿ ಸ್ಪರ್ಧಿಸುತ್ತಿರುವ 22 ವರ್ಷದ ಪವನ್ 3–2 ಅಂತರದಿಂದ ಬ್ರೆಜಿಲ್ನ ಮೈಕೆಲ್ ಡಗ್ಲಾಸ್ ಡಿಸಿಲ್ವ ಅವರನ್ನು ಹಿಮ್ಮೆಟ್ಟಿಸಿದರು.

ಆರಂಭದಲ್ಲೇ ತೀಕ್ಷ್ಣ ಹೊಡೆತಗಳ ಮೂಲಕ ಹಿಡಿತ ಸಾಧಿಸಿದ ಪವನ್, ಪ್ಯಾನ್ ಅಮೆರಿಕನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಬಾಕ್ಸರ್ಗೆ ಚೇತರಿಸಿಕೊಳ್ಳಲು ಅವಕಾಶ ನೀಡದೆ ಎರಡನೇ ಸುತ್ತು ಪ್ರವೇಶಿಸಿದರು.

ಹಿತೇಶ್ ಗುಲಿಯಾ (70 ಕೆಜಿ), ಅಭಿನಾಶ್ ಜಮ್ವಾಲ್ (65 ಕೆಜಿ), ಎರಡು ಬಾರಿಯ ಚಾಂಪಿಯನ್ ನಿಖತ್ ಜರಿನ್ (51 ಕೆಜಿ) ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ (70 ಕೆಜಿ) ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.