ಬೆಂಗಳೂರು: ಇಲ್ಲಿನ ರೇಸ್ಕೋರ್ಸ್ ಅಂಗಳದಲ್ಲಿ ಪ್ರತಿಷ್ಠಿತ ‘ಎಚ್ಪಿಎಸ್ಎಲ್ ಬೆಂಗಳೂರು ಡರ್ಬಿ’ ಭಾನುವಾರ (ಜ.26) ನಡೆಯಲಿದ್ದು, ಒಂಬತ್ತು ಕುದುರೆಗಳು ಪೈಪೋಟಿ ನಡೆಸಲಿವೆ.

ಚಳಿಗಾಲದ ಡರ್ಬಿಯು ಒಟ್ಟು ₹1.26 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ. ವಿಜೇತ ಕುದುರೆಯು ತನ್ನ ಮಾಲೀಕನಿಗೆ ₹61.70 ಲಕ್ಷ ದೊರಕಿಸಿಕೊಡಲಿದೆ’ ಎಂದು ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಅಧ್ಯಕ್ಷ ಮತ್ತು ಸೀನಿಯರ್ ಸ್ಟೀವರ್ಡ್ ಆರ್.ಮಂಜುನಾಥ್ ರಮೇಶ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಚ್ಪಿಎಸ್ಎಲ್ ಪ್ರಾಯೋಜಕತ್ವ: ಈ ಡರ್ಬಿ ರೇಸ್ ಅನ್ನು ಹಾರ್ಸ್ ಪವರ್ ಸ್ಪೋರ್ಟ್ಸ್ ಲೀಗ್ (ಎಚ್ಪಿಎಸ್ಎಲ್) ಸಂಸ್ಥೆಯು ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ನ ಸಹಭಾಗಿತ್ವದಲ್ಲಿ ಪ್ರಾಯೋಜಿಸುತ್ತಿದೆ. ಬಹುನಿರೀಕ್ಷಿತ ರೇಸ್ ಭಾನುವಾರ ಸಂಜೆ 4.25ಕ್ಕೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಇದೇ ವೇಳೆ ಟ್ರೋಫಿಗಳನ್ನು ಅನಾವರಣ ಮಾಡಲಾಯಿತು. ಬಳಿಕ ಡರ್ಬಿ ಕುದುರೆಗಳ ‘ಡ್ರಾ’ ಸಂಖ್ಯೆ
ನಿಗದಿಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.