ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್‌: ಹೊಸ ಕ್ರೀಡಾಂಗಣದಲ್ಲಿ ಓಡಿದ ಬೋಲ್ಟ್‌

Last Updated 21 ಡಿಸೆಂಬರ್ 2019, 19:56 IST
ಅಕ್ಷರ ಗಾತ್ರ

ಟೋಕಿಯೊ: ಸ್ಪ್ರಿಂಟ್‌ ದಂತಕತೆ ಉಸೇನ್‌ ಬೋಲ್ಟ್‌, ಟೋಕಿಯೊ ಒಲಿಂಪಿಕ್ಸ್‌ ಸ್ಪರ್ಧಾಕಣದಲ್ಲಿಲ್ಲ. ಆದರೆ,ಉದ್ಘಾಟನಾ ಸಮಾರಂಭಕ್ಕೆ ಏಳು ತಿಂಗಳು ಉಳಿದಿರುವಾಗ ಒಲಿಂಪಿಕ್ಸ್‌ಗಾಗಿ ನಿರ್ಮಿಸಿರುವ ನೂತನ ‘ನ್ಯಾಷನಲ್‌ ಸ್ಟೇಡಿಯಂ’ನ ಟ್ರ್ಯಾಕ್‌ ‌‌‌ಮೇಲೆ ಅವರು ಓಡಿ ಕಳೆಯೇರಿಸಿದರು.

ಅಥ್ಲೆಟಿಕ್ಸ್‌ಗೆ ವಿದಾಯ ಹೇಳಿರುವ ಬೋಲ್ಟ್‌,ಕ್ರೀಡಾಂಗಣದ ಉದ್ಘಾ ಟನೆಯ ಭಾಗವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಪ್ಯಾರಾಲಿಂಪಿಕ್‌ ಅಥ್ಲೀಟ್‌ಗಳ ಜೊತೆ ಓಡಿದರು. ಈ ಕ್ರೀಡಾಂಗಣದಲ್ಲಿ ಇದೇ ಮೊದಲ ಸಾರ್ವಜನಿಕ ಕಾರ್ಯಕ್ರಮ.

ತೈಕೊ ಡ್ರಮ್‌ಗಳ ಬೀಟ್‌ ಮೂಲಕ ಕಾರ್ಯಕ್ರಮ ಆರಂಭವಾಯಿತು. ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ ಗೆದ್ದಿರುವ ಬೋಲ್ಟ್‌ಗಿಂತ ಹೆಚ್ಚು ಹರ್ಷೊದ್ಗಾರ ಮೊಳಗಿದ್ದು, ಜೆ ಪಾಪ್‌ ಬಾಯ್‌ ಬ್ಯಾಂಡ್‌ ಅರಾಶಿ ತಂಡಕ್ಕೆ ಮತ್ತು ರಗ್ಬಿ ನಾಯಕ ಮೈಕೆಲ್‌ ಲೀಚ್‌ ಅವರಿಗೆ.

‘ಇಷ್ಟೊಂದು ಜನರ ಎದುರು ಓಡುವುದು ಅವಿಸ್ಮರಣೀಯ ಅನುಭವ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸದಿರುವ ಕಾರಣ ಈಗ ಓಡಲು ಸಿಕ್ಕಿದ್ದು ಸಂತಸ ಮೂಡಿಸಿದೆ’ ಎಂದು ಬೋಲ್ಟ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT