ಎಸ್‌ಪಿಎ–ಫ್ರ್ಯಾಂಕೊರ್‌ಚಾಂಪ್ಸ್, ಬೆಲ್ಜಿಯಂ : ಆರು ಬಾರಿಯ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿದ ವಾಲ್ಟೇರಿ ಬೊತಾಸ್ ಅವರು ಬೆಲ್ಜಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನ ಮೊದಲ ಸುತ್ತಿನ ತಾಲೀಮಿನಲ್ಲಿ ಅಗ್ರಸ್ಥಾನ ಗಳಿಸಿದರು.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಫಿನ್‌ಲೆಂಡ್‌ನ ಬೊತಾಸ್ ಅವರು ಸಹಚಾಲಕ ಮರ್ಸಿಡಿಸ್‌ನ ಹ್ಯಾಮಿಲ್ಟನ್ ಅವರಿಗಿಂತ 0.069 ಸೆಕೆಂಡುಗಳ ವೇಗದಲ್ಲಿ ಗುರಿ ಮುಟ್ಟಿದರು.

ಮಂದ ಬೆಳಕು ಹಾಗೂ ಮೋಡ ಕವಿದ ವಾತಾವರಣದಲ್ಲಿ, ರೆಡ್ ಬುಲ್ ಚಾಲಕ ಮ್ಯಾಕ್ಸ್ ವರ್ಸ್ಟ್ಯಾಪನ್ ಅವರು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಬೊತಾಸ್ ಅವರಿಗಿಂತ ಅವರು 0.081 ಸೆಕೆಂಡು ಹಿಂದೆ ಉಳಿದರು.

ಫೆರಾರಿ ತಂಡದ ಚಾಲಕರು ಲಯ ಕಂಡುಕೊಳ್ಳಲು ಮತ್ತೆ ವಿಫಲರಾದರು. ಚಾರ್ಲ್ಸ್ ಲೆಕ್ಲೆರ್ಕ್ ಹಾಗೂ ಸೆಬಾಸ್ಟಿಯನ್ ವೆಟಲ್ ಅವರಿಗೆ ಅಗ್ರ 10ರೊಳಗೂ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ.

ಎರಡನೇ ಸುತ್ತಿನ ತಾಲೀಮು ಆರ್ಡನ್ನೆಸ್ ಅರಣ್ಯ ಸಮೀಪದ ಏಳು ಕಿಲೊ ಮೀಟರ್ ಟ್ರ್ಯಾಕ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.