ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿನೇಶ್ ಫೋಗಟ್‌ ಮೇಲ್ಮನಿಯ ತೀರ್ಪು: ಆ. 11ಕ್ಕೆ ಮುಂದೂಡಿದ ಕ್ರೀಡಾ ನ್ಯಾಯಮಂಡಳಿ

Published : 10 ಆಗಸ್ಟ್ 2024, 16:20 IST
Last Updated : 10 ಆಗಸ್ಟ್ 2024, 16:20 IST
ಫಾಲೋ ಮಾಡಿ
Comments

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆ.ಜಿ. ವಿಭಾಗದಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಭಾರತೀಯ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಸಲ್ಲಿಸಿರುವ ಮೇಲ್ಮನವಿ ಮೇಲಿನ ತೀರ್ಪನ್ನು ನಾಳೆಗೆ (ಆ. 11) ಕ್ರೀಡಾ ನ್ಯಾಯ ಮಂಡಳಿಯ (ಸಿಎಎಸ್) ತಾತ್ಕಾಲಿಕ ವಿಭಾಗವು ಮುಂದೂಡಿದೆ.

ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಾರೆ ಎಂದು ವಿನೇಶ್‌ ಅವರನ್ನು ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.

ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ (ಅಡ್‌–ಹಾಕ್‌), ತಮ್ಮ ವಿರುದ್ಧದ ಕ್ರಮ ಪ್ರಶಸ್ನಿ ವಿನೇಶ್‌ ಶುಕ್ರವಾರ ಮೇಲ್ಮನವಿ ಸಲ್ಲಿಸಿದ್ದರು.

ವಿನೇಶ್‌ ಅವರು, ಫೈನಲ್‌ ಪಂದ್ಯದ ಮುನ್ನಾದಿನ ‌ಮೂರು ಪಂದ್ಯಗಳಲ್ಲಿ ಸೆಣಸಿದ್ದರು. ಆ ದಿನ ನಿಗದಿತ ತೂಕದ ಮಿತಿಯಲ್ಲಿ ಇದ್ದ ಕಾರಣ ತಮಗೆ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಕೋರಿದ್ದರು. ಮೇಲ್ಮನವಿಯ ವಿಚಾರಣೆಯು ಶುಕ್ರವಾರವೇ ಪೂರ್ಣಗೊಳಿಸಲಾಗಿದೆ.

ತಾತ್ಕಾಲಿಕ ವಿಭಾಗದ ಅಧ್ಯಕ್ಷರು, ಸಿಎಎಸ್‌ ಮಂಡಳಿಯ ನಿಯಮಗಳ ಆರ್ಟಿಕಲ್‌ 18ರ ಅನ್ವಯ, ತೀರ್ಪು ಪ್ರಕಟಿಸಲು ಸಮಯ ಮಿತಿಯನ್ನು 2024ರ ಆಗಸ್ಟ್‌ 10, ಸಂಜೆ 6ಕ್ಕೆ (ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ) ವಿಸ್ತರಿಸಲಾಗಿತ್ತು. ಈಗ ಇದನ್ನು ಆ. 11ರವರೆಗೆ ಮುಂದೂಡಲಾಗಿದೆ.

ಒಂದೇ ದಿನ ಮೂರು ಹಣಾಹಣಿ

ವಿನೇಶಾ ಅವರು ಮಂಗಳವಾರ (ಆಗಸ್ಟ್ 6ರಂದು) ಒಂದೇ ದಿನ ನಡೆದ ಮೂರು ಹಣಾಹಣಿಗಳಲ್ಲಿ ಎದುರಾಳಿಗಳ ಎಡೆಮುರಿ ಕಟ್ಟಿ ಫೈನಲ್‌ ತಲುಪಿದ್ದರು.

ವಿಶ್ವ ಚಾಂಪಿಯನ್ ಮತ್ತು ಕಳೆದ ಬಾರಿಯ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ, ಜಪಾನಿನ ಯುಯಿ ಸುಸಾಕಿ ಅವರನ್ನು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಮತ್ತು ಉಕ್ರೇನ್‌ನ ಒಕ್ಸಾನಾ ಲಿವಾಚ್‌ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿದ್ದರು. ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್‌ ಅವರನ್ನು ಮಣಿಸಿದ್ದರು.

ವಿನೇಶ್‌ ಅನರ್ಹತೆಯಿಂದಾಗಿ ಲೊಪೇಜ್‌ ಅವರಿಗೆ ಫೈನಲ್‌ ಟಿಕೆಟ್ ಲಭಿಸಿತ್ತು. ಸುಸಾಕಿ ಹಾಗೂ ಲಿವಾಚ್‌ ಅವರಿಗೂ ಕಂಚಿನ ಪದಕಕ್ಕೆ ಹೋರಾಡುವ ಅವಕಾಶ ದೊರಕಿತ್ತು.

ಆಗಸ್ಟ್‌ 7ರಂದು ನಡೆದ ಫೈನಲ್‌ನಲ್ಲಿ ಗೆದ್ದ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಲೊಪೇಜ್‌ಗೆ ಬೆಳ್ಳಿ, ಚೀನಾದ ಫೆಂಗ್‌ ಝಿಕಿ ಮತ್ತು ಸುಸಾಕಿಗೆ ಕಂಚು ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT