ದಾವಣಗೆರೆ: ತುಮಕೂರಿನ ಹರಿಪ್ರೀತ್ ಗುರುಕಾರ್ ಕೆ, ಬೆಳಗಾವಿಯ ಶ್ರೀಕರ್ ದರ್ಭಾ ಹಾಗೂ ಮೈಸೂರಿನ ಅಜಿತ್ ಎಂ.ಪಿ ಇಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಮುಕ್ತ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ 11, 15 ವರ್ಷದೊಳಗಿನ ಮತ್ತು ಮುಕ್ತ ವಿಭಾಗಗಳಲ್ಲಿ ಜಯದೇವ ಟ್ರೋಫಿ ಗೆದ್ದುಕೊಂಡರು.

ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವದ ಅಂಗವಾಗಿ ಶಿವಯೋಗಾಶ್ರಮ ಟ್ರಸ್ಟ್, ದಾವಣಗೆರೆ ಚೆಸ್ ಕ್ಲಬ್. ರೋಟರಿ ಕ್ಲಬ್ ಆಶ್ರಯದಲ್ಲಿ ರೋಟರಿ ಬಾಲಭವನ ದಲ್ಲಿ ಟೂರ್ನಿ ಹಮ್ಮಿಕೊಳ್ಳಲಾಗಿತ್ತು. 11 ವರ್ಷದೊಳಗಿನ ವಿಭಾಗದಲ್ಲಿ ತೀರ್ಥಹಳ್ಳಿಯ ತೇಜಸ್ ಎಂ.ಶೆಣೈ ಹಾಗೂ ಚೇತನ್‌ಕುಮಾರ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯರಾದರು.

15 ವರ್ಷದೊಳಗಿನವರಲ್ಲಿ ಶ್ರೀಕರ್ ದರ್ಭಾ ಹಾಗೂ ಪ್ರಥಮ್ ಪಿ. ಸಹಸ್ರಬುದ್ಧೆ ಸಮಬಲ ಸಾಧಿಸಿದ್ದರು. ಆದರೆ, ಬುಕ್‌ಹೌಸ್ ಹಾಗೂ ಎಸ್.ಬಿ.ನಲ್ಲಿ ಮುನ್ನಡೆ ಸಾಧಿಸಿದ್ದರಿಂದ ಶ್ರೀಕರ್ ಮೊದಲ ಸ್ಥಾನ ಪಡೆದರು. ಅಮಿತ್ ಶಾಸ್ತ್ರಿ ಎಚ್.ಎಸ್. ತೃತೀಯ ಸ್ಥಾನ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.