ಮೈಸೂರು: ಅಥ್ಲೆಟಿಕ್ಸ್, ಈಜು ಹಾಗೂ ಗುಂಪು ವಿಭಾಗದ ಬಹುತೇಕ ಸ್ಪರ್ಧೆಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ ಬೆಂಗಳೂರು ನಗರ ವಿಭಾಗದ ಸ್ಪರ್ಧಿಗಳು ಭಾನುವಾರ ಇಲ್ಲಿ ಮುಕ್ತಾಯಗೊಂಡ ಸಿ.ಎಂ. ಕಪ್ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದರು.

ಒಟ್ಟು 201 ಅಂಕಗಳೊಂದಿಗೆ ಬೆಂಗಳೂರು ನಗರ ವಿಭಾಗವು ಪ್ರಶಸ್ತಿ ಎತ್ತಿಹಿಡಿಯಿತು. ಅವರಿಗೆ ತೀವ್ರ ಪೈಪೋಟಿ ಒಡ್ಡಿದ ಮೈಸೂರು ವಿಭಾಗವು 194 ಅಂಕಗಳೊಂದಿಗೆ ರನ್ನರ್ಸ್ ಅಪ್ ಸ್ಥಾನ ಪಡೆಯಿತು. ಬೆಳಗಾವಿ 131 ಅಂಕ, ಬೆಂಗಳೂರು ಗ್ರಾಮೀಣ 123 ಅಂಕ ಹಾಗೂ ಕಲಬುರಗಿ 45 ಅಂಕಗಳೊಂದಿಗೆ ಕ್ರಮವಾಗಿ ನಂತರದ ಸ್ಥಾನ ಪಡೆದವು.

ಲಾಂಗ್‌ಜಂಪ್‌ನಲ್ಲಿ 7.53 ಮೀಟರ್ ಜಿಗಿದು ದಾಖಲೆ ನಿರ್ಮಿಸುವ ಜೊತೆಗೆ ಟ್ರಿಪಲ್ ಜಂಪ್‌ನಲ್ಲೂ ಚಿನ್ನ ಗೆದ್ದಿದ್ದ ಬೆಳಗಾವಿಯ ಜಫರ್‌ಖಾನ್ 1035 ಅಂಕಗಳೊಂದಿಗೆ ಪುರುಷರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು. ಮಹಿಳೆಯರ ವಿಭಾಗದಲ್ಲಿ 400 ಮೀಟರ್ಸ್ ಓಟದಲ್ಲಿ ಚಿನ್ನ, 200 ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದ ಧಾರವಾಡದ ಮೇಘಾ ಮುನವಳ್ಳಿಮಠ 992 ಅಂಕಗಳೊಂದಿಗೆ ವೈಯಕ್ತಿಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕೊನೆಯ ದಿನ ನಡೆದ ಪುರುಷರ 10 ಸಾವಿರ ಮೀ. ಓಟದಲ್ಲಿ ಧಾರವಾಡದ ನಾಗರಾಜು ದಿವಟೆ 33ನಿಮಿಷ, 24.47 ಸೆಕೆಂಡುಗಳಲ್ಲಿ ಗುರಿ ಕ್ರಮಿಸುವ ಮೂಲಕ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಬೆಂಗಳೂರಿನ ಟಿ.ಎಸ್. ಸಂದೀಪ್ ದ್ವಿತೀಯ ಹಾಗೂ ತುಮಕೂರಿನ ಎಚ್.ಎ. ದರ್ಶನ್ ತೃತೀಯ ಸ್ಥಾನ ಪಡೆದರು.

ಗುಂಪು ಕ್ರೀಡೆಗಳ ಫಲಿತಾಂಶ
ಪುರುಷರು: ಹಾಕಿ: ಬೆಂಗಳೂರು ನಗರ–1, ಮೈಸೂರು–2, ಬೆಳಗಾವಿ–3; ಕಬಡ್ಡಿ: ಮೈಸೂರು–1, ಬೆಂಗಳೂರು ನಗರ–2, ಬೆಳಗಾವಿ–3; ಕೊಕ್ಕೊ: ಬೆಂಗಳೂರು ನಗರ–2, ಬೆಂಗಳೂರು ಗ್ರಾಮೀಣ–2, ಮೈಸೂರು–3; ಥ್ರೋಬಾಲ್: ಮೈಸೂರು–1, ಬೆಂಗಳೂರು ನಗರ–2, ಬೆಳಗಾವಿ–3; ವಾಲಿಬಾಲ್: ಮೈಸೂರು–1, ಬೆಂಗಳೂರು ನಗರ–2, ಬೆಳಗಾವಿ–3.

ಬಾಲ್ ಬ್ಯಾಡ್ಮಿಂಟನ್: ಮೈಸೂರು–1, ಬೆಂಗಳೂರು ನಗರ–2, ಬೆಂಗಳೂರು ಗ್ರಾಮೀಣ–3; ಫುಟ್‌ಬಾಲ್: ಮೈಸೂರು–1, ಕಲಬುರಗಿ–2, ಬೆಳಗಾವಿ–3; ಹ್ಯಾಂಡ್‌ಬಾಲ್; ಬೆಂಗಳೂರು ಗ್ರಾಮೀಣ–1, ಮೈಸೂರು–2, ಬೆಂಗಳೂರು ನಗರ–3; ಬ್ಯಾಸ್ಕೆಟ್‌ಬಾಲ್: ಬೆಂಗಳೂರು ನಗರ–1, ಮೈಸೂರು–2, ಬೆಂಗಳೂರು ಗ್ರಾಮೀಣ–3; ಟೇಬಲ್ ಟೆನಿಸ್: ಬೆಂಗಳೂರು ನಗರ–1, ಮೈಸೂರು–2, ಬೆಳಗಾವಿ–3; ಫೆನ್ಸಿಂಗ್: ಬೆಂಗಳೂರು ನಗರ–1, ಮೈಸೂರು–2, ಬೆಂಗಳೂರು ಗ್ರಾಮೀಣ–3.

ಮಹಿಳೆಯರು:
ಹಾಕಿ: ಮೈಸೂರು–1, ಬೆಂಗಳೂರು ಗ್ರಾಮೀಣ–2, ಬೆಳಗಾವಿ–3; ಕಬಡ್ಡಿ: ಬೆಳಗಾವಿ–1, ಮೈಸೂರು–2, ಬೆಂಗಳೂರು ನಗರ–3; ಕೊಕ್ಕೊ: ಮೈಸೂರು–1, ಬೆಂಗಳೂರು ನಗರ–2, ಕಲಬುರಗಿ–3; ಥ್ರೋಬಾಲ್: ಮೈಸೂರು–1, ಬೆಂಗಳೂರು ನಗರ–2, ಬೆಂಗಳೂರು ಗ್ರಾಮೀಣ–3; ವಾಲಿಬಾಲ್: ಮೈಸೂರು–1, ಬೆಂಗಳೂರು ನಗರ–2, ಬೆಳಗಾವಿ–3.

ಬಾಲ್ ಬ್ಯಾಡ್ಮಿಂಟನ್: ಮೈಸೂರು–1, ಬೆಂಗಳೂರು ನಗರ–2, ಬೆಂಗಳೂರು ಗ್ರಾಮೀಣ–3; ಹ್ಯಾಂಡ್‌ಬಾಲ್: ಮೈಸೂರು–1, ಬೆಂಗಳೂರು ಗ್ರಾಮೀಣ–2, ಬೆಂಗಳೂರು ನಗರ–3; ಬ್ಯಾಸ್ಕೆಟ್‌ಬಾಲ್: ಮೈಸೂರು–1, ಬೆಂಗಳೂರು ನಗರ–2, ಬೆಂಗಳೂರು ಗ್ರಾಮೀಣ–3; ನೆಟ್‌ಬಾಲ್: ಬೆಂಗಳೂರು ನಗರ–1, ಮೈಸೂರು–2, ಕಲಬುರಗಿ–3; ಟೆನಿಸ್: ಮೈಸೂರು–1, ಬೆಂಗಳೂರು ಗ್ರಾಮೀಣ–2, ಬೆಂಗಳೂರು ನಗರ–3; ಫೆನ್ಸಿಂಗ್: ಬೆಂಗಳೂರು ನಗರ–1, ಕಲಬುರಗಿ–2, ಮೈಸೂರು–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.