ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ ವಿಶ್ವಕಪ್‌ ಫೈನಲ್‌: ಬೆಳ್ಳಿ ಗೆದ್ದ ದೀಪಿಕಾ ಬಳಗ

ಫೈನಲ್‌ನಲ್ಲಿ ಚೀನಾ ತೈಪೆ ಎದುರು ಸೋಲು
Last Updated 26 ಜೂನ್ 2022, 11:16 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತ ಮಹಿಳಾ ರಿಕರ್ವ್‌ ವಿಭಾಗದ ತಂಡವು ಆರ್ಚರಿ ವಿಶ್ವಕಪ್ ಸ್ಟೇಜ್ 3 ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದೆ.

ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಮತ್ತು ಸಿಮ್ರನ್‌ಜೀತ್ ಕೌರ್‌ ಅವರನ್ನೊಳಗೊಂಡ ತಂಡವು ಫೈನಲ್‌ನಲ್ಲಿ 1–5 ಪಾಯಿಂಟ್ಸ್‌ನಿಂದ ಚೀನಾ ತೈಪೆ ಆಟಗಾರ್ತಿಯರ ಎದುರು ಎಡವಿತು.

ಭಾನುವಾರ ಕೊನೆಗೊಂಡ ಟೂರ್ನಿಯಲ್ಲಿಭಾರತ ಒಟ್ಟು ಒಂದು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿತು.

ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಲಿ ಚೆನ್‌ ಯಿಂಗ್ ಅವರನ್ನೊಳಗೊಂಡ ಚೀನಾ ತೈಪೆ, ಮೂರು ಸೆಟ್‌ಗಳ ಹಣಾಹಣಿಯಲ್ಲಿ ಭಾರತದ ಆಟಗಾರ್ತಿಯರಿಗೆ ಸೋಲುಣಿಸಿತು.

ಮೊದಲ ಸೆಟ್‌ಅನ್ನು 53–56ರಿಂದ ಕೈಚೆಲ್ಲಿದ ದೀಪಿಕಾ ಬಳಗ ಎರಡನೇ ಸೆಟ್‌ಅನ್ನು 56–56ರಿಂದ ಸಮಬಲಗೊಳಿಸಿತು. ಆದರೆ ಸ್ಥಿರ ಪ್ರದರ್ಶನದ ಮೂಲಕ ಗಮನಸೆಳೆದ ಚೀನಾ ತೈಪೆ, ಮೂರನೇ ಸೆಟ್‌ನಲ್ಲಿ 56–53ರಿಂದ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿತು.

ಟೋಕಿಯೊ ಒಲಿಂಪಿಕ್ಸ್ ಬಳಿಕ ಮಂಕಾಗಿದ್ದ ದೀಪಿಕಾ ಇಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಲಯ ಕಂಡುಕೊಂಡರು.

ಅಭಿಷೇಕ್‌ ವರ್ಮ ಮತ್ತು ಜ್ಯೋತಿ ಸುರೇಖಾ ವೆನ್ನಂ ಶನಿವಾರಕಾಂಪೌಂಡ್‌ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT