ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಟಗಾರರಿಗೆ ಸಿಗದ ವೀಸಾ: ಪಾಕ್‌ ಕ್ರೀಡಾ ಸಂಸ್ಥೆಯಿಂದ ದೂರು

Published : 25 ಆಗಸ್ಟ್ 2024, 16:21 IST
Last Updated : 25 ಆಗಸ್ಟ್ 2024, 16:21 IST
ಫಾಲೋ ಮಾಡಿ
Comments

ಕರಾಚಿ: ಬೆಂಗಳೂರಿನಲ್ಲಿ ಶನಿವಾರ ಆರಂಭವಾದ ಐಬಿಎಸ್‌ಎಫ್‌ 18 ವರ್ಷ ಮತ್ತು 21 ವರ್ಷದೊಳಗಿನವರ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ಲ್ಲಿ ತಮ್ಮ ತಂಡಕ್ಕೆ ಭಾರತ ಹೈಕಮಿಷನ್ ವೀಸಾ ನಿರಾಕರಿಸಿರುವುದನ್ನು ಖಂಡಿಸಿ ಪಾಕಿಸ್ತಾನ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆಯು (ಪಿಬಿಎಸ್‌ಎ), ಅಂತರರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಫೆಡರೇಷನ್‌ (ಐಬಿಎಸ್‌ಎಫ್‌) ಮತ್ತು ಭಾರತದ ಆಯೋಜಕರಿಗೆ ಅಧಿಕೃತವಾಗಿ ದೂರು ಸಲ್ಲಿಸಿದೆ.

ತಮ್ಮ ದೇಶದ ಮೂವರು ಆಟಗಾರರಿಗೆ– ಅಹಸಾನ್ ರಮಝಾನ್, ಹಸ್ನೇನ್ ಅಖ್ತರ್ ಮತ್ತು ಹಂಝಾ ಇಲ್ಯಾಸ್ ಅವರಿಗೆ ವೀಸಾ ಸಿಗಲಿಲ್ಲ ಎಂದು ಪಿಬಿಎಸ್‌ಎ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

‘ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ ಕ್ರೀಡಾ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆದ ನಂತರ ಮೂವರು ಸ್ಪರ್ಧಿಗಳಿಗೆ ವೀಸಾ ನೀಡುವಂತೆ ನಾವು ಭಾರತದ ಹೈಕಮಿಷನ್‌ಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಿದ್ದೆವು. ಆದರೆ ವೀಸಾ ಸಿಗಲಿಲ್ಲ. ಇದರಿಂದಾಗಿ ನಮ್ಮ ತಂಡ ಬೆಂಗಳೂರಿಗೆ ಪ್ರಯಾಣಿಸಲು ಆಗಲಿಲ್ಲ’ ಎಂದು ಆಲಂಗೀರ್ ಶೇಖ್ ತಿಳಿಸಿದ್ದಾರೆ.

‘ಈ ಮೂರು ಮಂದಿ ಪಾಕಿಸ್ತಾನ ಪರ ಅತ್ಯುತ್ತಮ ಸಾಧನೆ ತೋರಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳಿದ್ದವು. ಆದರ ಅವರು ಅವಕಾಶವಂಚಿತರಾಗಿದ್ದಾರೆ’ ಎಂದು ಶೇಖ್ ಹೇಳಿದ್ದಾರೆ.

‘ನಮ್ಮ ರೆಫ್ರಿಗಳಲ್ಲಿ ಒಬ್ಬರಾದ ನವೀದ್ ಕಪಾಡಿಯಾ ಅವರಿಗೂ ವೀಸಾ ಸಮಸ್ಯೆಯಿಂದಾಗಿ ಬೆಂಗಳೂರಿಗೆ ಹೋಗಲು ಆಗಲಿಲ್ಲ. ಅವರನ್ನು ಐಬಿಎಸ್‌ಎಫ್‌ ಈ ಚಾಂಪಿಯನ್‌ಷಿಪ್‌ಗೆ ನಾಮನಿರ್ದೇಶನ ಮಾಡಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT