ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೇಬಲ್ ಟೆನಿಸ್‌: ಪ್ರಶಸ್ತಿ ಗೆದ್ದ ಆಕಾಶ್‌, ದೇಶ್ನಾ ವಂಶಿಕಾ

ಯಶ್ವಂತ್‌, ಅನರ್ಘ್ಯ ರನ್ನರ್ ಅಪ್‌
Published 5 ಜುಲೈ 2024, 16:11 IST
Last Updated 5 ಜುಲೈ 2024, 16:11 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರಿನ ಡಬ್ಲ್ಯುಸಿಟಿಟಿಸಿಯ ಆಕಾಶ್‌ ಕೆ.ಜೆ ಮತ್ತು ಬಿಎನ್‌ಎಂನ ದೇಶ್ನಾ ವಂಶಿಕಾ, ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಕಂಕನಾಡಿಯ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಯೋಜಿಸಿರುವ ಟೂರ್ನಿಯ ಎರಡನೇ ದಿನವಾದ ಶುಕ್ರವಾರ ಪುರುಷರ ವಿಭಾಗದ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಆಕಾಶ್ 11-8, 11-4, 11-4, 11-7ರಲ್ಲಿ ನಾಲ್ಕನೇ ಶ್ರೇಯಾಂಕದ ಯಶ್ವಂತ್ ಎದುರು ಗೆದ್ದರು.

ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ದೇಶ್ನಾ 4-11, 11-8, 11-5, 11-6, 13-11ರಲ್ಲಿ ಡಬ್ಲ್ಯುಸಿಟಿಟಿಸಿಯ ಎರಡನೇ ಶ್ರೇಯಾಂಕಿತೆ ಅನರ್ಘ್ಯ ಮಂಜುನಾಥ್ ಎದುರು ಗೆದ್ದರು.  

ಪುರುಷರ ವಿಭಾಗದ ಅಗ್ರ ಶ್ರೇಯಾಂಕದ ಅನಿರ್ಭನ್ ರಾಯ್ ಚೌಧರಿ ಸೆಮಿಫೈನಲ್‌ನಲ್ಲಿ ಸೋತಿದ್ದರು. ಗುರುವಾರ 19 ವರ್ಷದೊಳಗಿನವರ ಪ್ರಶಸ್ತಿ ಗೆದ್ದಿದ್ದ ರೋಹಿತ್ ಶಂಕರ್‌ ಅವರನ್ನು ಸೆಮಿಯಲ್ಲಿ ಆಕಾಶ್ ಮಣಿಸಿದ್ದರು.

ಖುಷಿಗೆ ಆಘಾತ: ಮೊದಲ ರಾಜ್ಯ ರ‍್ಯಾಂಕಿಂಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಡಬ್ಲ್ಯುಸಿಟಿಟಿಸಿಯ ಖುಷಿ ವಿ, ಇಲ್ಲಿ ಆಘಾತ ಅನುಭವಿಸಿದರು. ಗುರುವಾರ 19 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಗೆದ್ದಿದ್ದ ಸಹನಾ ಮೂರ್ತಿ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಖುಷಿ ಸೋತರು.

ಫಲಿತಾಂಶಗಳು

ಪುರುಷರ ಫೈನಲ್‌: ಆಕಾಶ್‌ಗೆ ಯಶ್ವಂತ್‌ ವಿರುದ್ಧ 11-8,11-4,11-4,11-7ರಲ್ಲಿ ಗೆಲುವು.

ಸೆಮಿಫೈನಲ್‌: ಆಕಾಶ್‌ಗೆ ರೋಹಿತ್ ಶಂಕರ್ ವಿರುದ್ಧ 11-8,3-11,6-11,11-4,12-10,11-7ರಲ್ಲಿ, ಯಶ್ವಂತ್‌ಗೆ ಅನಿರ್ಬನ್‌ ವಿರುದ್ಧ 11-9,5-11,11-8,11-4,6-11,11-3ರಲ್ಲಿ ಜಯ.

ಕ್ವಾರ್ಟರ್‌ ಫೈನಲ್‌: ಆಕಾಶ್‌ಗೆ ಶ್ರೇಯಲ್ ವಿರುದ್ಧ 7-11,11-7,11-3,9-11,11-7ರಲ್ಲಿ, ಯಶ್ವಂತ್‌ಗೆ ವಿಭಾಸ್ ವಿರುದ್ಧ 11-9,4-11,11-8,11-4ರಲ್ಲಿ, ಅನಿರ್ಭನ್‌ಗೆ ತೇಶುಬ್ ವಿರುದ್ಧ 10-12,11-2,11-9,11-8ರಲ್ಲಿ, ರೋಹಿತ್‌ಗೆ ಕಲೈವಣ್ಣನ್ ವಿರುದ್ಧ 11-9,11-4,11-8ರಲ್ಲಿ ಜಯ.

ಮಹಿಳೆಯರ ಫೈನಲ್‌: ದೇಶ್ನಾಗೆ ಅನರ್ಘ್ಯ ವಿರುದ್ಧ 4-11,11-8,11-5,11-6,13-11ರಲ್ಲಿ ಜಯ.

ಸೆಮಿಫೈನಲ್‌: ದೇಶ್ನಾಗೆ ತೃಪ್ತಿ ವಿರುದ್ಧ 10-12,11-2,11-6,12-10,11-1ರಲ್ಲಿ, ಅನರ್ಘ್ಯಗೆ ಸಹನಾ ಎದುರು 7-11,11-8,7-11,13-11,11-9,11-8ರಲ್ಲಿ ಜಯ.

ಕ್ವಾರ್ಟರ್ ಫೈನಲ್‌:  ದೇಶ್ನಾಗೆ ಹಿಮಾಂಶಿ ವಿರುದ್ಧ 9-11,12-10,11-5,12-10ರಲ್ಲಿ, ಅನರ್ಘ್ಯಗೆ ತನಿಷ್ಕಾ ವಿರುದ್ಧ 15-17,12-10,14-12,11-5ರಲ್ಲಿ, ತೃಪ್ತಿಗೆ ಪ್ರೇಕ್ಷಾ ಎದುರು 11-2,11-9,11-4ರಲ್ಲಿ, ಸಹನಾಗೆ ಖುಷಿ ವಿರುದ್ಧ 6-11,11-4,11-5,11-5ರಲ್ಲಿ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT