ಲಿಮಾ, ಪೆರು: ಭಾರತದ ಶೂಟರ್ ದಿವಾನ್ಶಿ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನ ವೈಯಕ್ತಿಕ ಮಹಿಳೆಯರ 25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

ಭಾರತದ ಶೂಟರ್‌ಗಳು ಶುಕ್ರವಾರ ಎರಡು ಚಿನ್ನ ಸೇರಿ ಐದು ಪದಕಗಳನ್ನು ಗೆದ್ದಿದ್ದಾರೆ. ಈ ಮೂಲಕ ಭಾರತವು 21 ಪದಕಗಳೊಂದಿಗೆ (13 ಚಿನ್ನ, 2 ಬೆಳ್ಳಿ ಮತ್ತು 6 ಕಂಚು) ಅಗ್ರಸ್ಥಾನ ಕಾಯ್ದುಕೊಂಡಿದೆ. ನಾರ್ವೆ ನಾಲ್ಕು ಚಿನ್ನ ಸೇರಿ 10 ಪದಕಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ.

25 ಮೀಟರ್ ಸ್ಟ್ಯಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರೂ ಪದಕಗಳು ಭಾರತದ ಪಾಲಾದವು. ಫೈನಲ್ ಸುತ್ತಿನಲ್ಲಿ ದಿವಾಶ್ಯಿ 564 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಪರೀಶಾ ಗುಪ್ತಾ (559) ಮತ್ತು ಮಾನ್ವಿ ಜೈನ್ (557) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ದಿವಾನ್ಶಿ ಅವರು ಮಹಿಳೆಯರ 25 ಮೀ ಪಿಸ್ತೂಲ್ ಸ್ಪರ್ಧೆಯ ವೈಯಕ್ತಿಕ ಮತ್ತು ತಂಡ ವಿಭಾಗದಲ್ಲೂ ಚಿನ್ನದ ಸಾಧನೆ ಮಾಡಿದ್ದರು.

ಪುರುಷರ ಸ್ಪರ್ಧೆಯಲ್ಲಿ ಭಾರತದ ಸೂರಜ್ ಶರ್ಮಾ 571 ಸ್ಕೋರ್‌ನೊಂದಿಗೆ ಚಿನ್ನ ಗೆದ್ದರು. ಪೋಲೆಂಡ್‌ನ ಇವಾನ್ ರಾಕಿಸ್ಟ್ಸ್ಕಿ ಬೆಳ್ಳಿ ಜಯಿಸಿದರು. ಕೂಟದಲ್ಲಿ ಈಗಾಗಲೇ ನಾಲ್ಕು ಚಿನ್ನ ಗೆದ್ದಿರುವ ಭಾರತದ ನೆಲವಳ್ಳಿ ಕಂಚು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.